ನವದೆಹಲಿ: ಯುವಕನೊಬ್ಬನನ್ನು ಕೊಚ್ಚಿ ಕೊಲೆ ಮಾಡಿ ದೇಹವನ್ನು ತುಂಡು ಮಾಡಿ ಫ್ರಿಡ್ಜ್ ನಲ್ಲಿ ಇರಿಸಿದ ಭೀಕರ ಘಟನೆ ದಕ್ಷಿಣ ದೆಹಲಿಯ ಸೈದುಲಾಬಾಜ್ ಪ್ರದೇಶದಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು 26 ವರ್ಷದ ಉತ್ತರಾಖಂಡ್ ಮೂಲದ ವಿಪಿನ್ ಜೋಶಿ ಎಂದು ಗುರುತಿಸಲಾಗಿದೆ.
ಜೋಶಿ ಕಳೆದೆರಡು ದಿನಗಳಿಂದ ಕಾಣೆಯಾಗಿದ್ದರು. ಅವರ ಕುಟುಂಬದವರು ಹುಡುಕಾಟ ನಡೆಸುತ್ತಾ ನಿನ್ನೆ ಅವರ ಸ್ನೇಹಿತ ಬಾದಲ್ ಮಂಡಲ್ ಮನೆಗೆ ಹೋಗಿದ್ದಾರೆ.
ಸ್ನೇಹಿತನ ಮನೆ ಹೊರಗಿನಿಂದ ಬೀಗ ಹಾಕಿತ್ತು. ಆದರೆ ಒಳಗಿನಿಂದ ವಾಸನೆ ಬರುತ್ತಿತ್ತು. ಸಂಶಯ ಬಂದು ಪೊಲೀಸರಿಗೆ ವಿಷಯ ತಿಳಿಸಿದರು.
ಪೊಲೀಸರು ಬಾಗಿಲು ಒಡೆದು ಒಳಗೆ ಹೋಗಿ ಹುಡುಕಿದಾಗ ವಿಪಿನ್ ಮೃತದೇಹವನ್ನು ತುಂಡು ತುಂಡುಮಾಡಿ ಇಡಲಾಗಿದೆ.
ಪೊಲೀಸರು ಕೇಸು ದಾಖಲಿಸಿದ್ದು ಮಂಡಲ್ ಪತ್ತೆಗಾಗಿ ಹುಡುಕಾಟ ನಡೆಯುತ್ತಿದೆ.