ದೇಶ

ಕೇಂದ್ರದ ಪರ ಶೇ.85 ಜನತೆಗೆ ವಿಶ್ವಾಸ, ಶೇ.27 ಮಂದಿಗೆ ದೃಢ ನಾಯಕತ್ವ ಬೇಕು: ಪ್ಯೂ ಸಮೀಕ್ಷೆ

Srinivas Rao BV
ನವದೆಹಲಿ: ಕೇಂದ್ರ ಸರ್ಕಾರದ ಪರ ಶೇ.85 ರಷ್ಟು ಜನತೆ ನಂಬಿಕೆ ಹೊಂದಿದ್ದು, ಶೇ.27 ರಷ್ಟು ಮಂದಿಗೆ ಮತ್ತಷ್ಟು ದೃಢ ನಾಯಕ್ವ ಬೇಕೆಂದು ಪ್ಯೂ ಸಮೀಕ್ಷೆಯ ವರದಿ ಹೇಳಿದೆ. 
2012 ರಿಂದ ದೇಶದ ಆರ್ಥಿಕತೆ ಸರಾಸರಿ ಶೇ.6.9 ರಷ್ಟು ಬೆಳೆದಿದ್ದು, ಶೇ.85 ರಷ್ಟು ಜನತೆ ಕೇಂದ್ರ ಸರ್ಕಾರದ ಬಗ್ಗೆ ನಂಬಿಕೆ ಇಟ್ಟಿದ್ದಾರೆ. ಅಚ್ಚರಿಯೆಂದರೆ ದೇಶದಲ್ಲಿ ಮಿಲಿಟರಿ ಆಡಳಿತ, ಸರ್ವಾಧಿಕಾರತ್ವಕ್ಕೂ ಭಾರಿ ಬೆಂಬಲ ವ್ಯಕ್ತವಾಗಿದೆ ಎಂಬ ಅಂಶ ಸಮೀಕ್ಷೆ ವರದಿಯಲ್ಲಿ ದಾಖಲಾಗಿದೆ. 
ಆಡಳಿತ ಹಾಗೂ ನಂಬಿಕೆಗೆ ಸಂಬಂಧಿಸಿದಂತೆ ಪ್ರಮುಖ ರಾಷ್ಟ್ರಗಳಲ್ಲಿ ಸಮೀಕ್ಷೆ ನಡೆದಿದ್ದು, ಶೇ.55 ರಷ್ಟು ಭಾರತೀಯರು ಒಂದಲ್ಲಾ ಒಂದು ರೀತಿಯಲ್ಲಿ ನಿರಂಕುಶ ಪ್ರಭುತ್ವದತ್ತ ಒಲವು ಹೊಂದಿದ್ದು, ಶೇ.27 ರಷ್ಟು ಮಂದಿ 4ನೇ ಒಂದರಷ್ಟು ಜನತೆಗೆ ಮತ್ತಷ್ಟು ದೃಢ ನಾಯಕತ್ವವನ್ನು ಬಯಸುತ್ತಿದ್ದಾರೆ.  
ಇನ್ನು ಜಾಗತಿಕ ಮಟ್ಟದಲ್ಲೂ ಇದೇ ಮಾದರಿಯ ಅಭಿಪ್ರಾಯ ವ್ಯಕ್ತವಾಗಿದ್ದು, ಶೇ.26 ರಷ್ಟು ಮಂದಿ ಕಠಿಣ ನಾಯಕ ಸಂಸತ್ ಹಾಗೂ ನ್ಯಾಯಾಲಯಗಳ ಹಸ್ತಕ್ಷೇಪ ಇಲ್ಲದೇ ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ಆಡಳಿತ ನಡೆಸುವ ವಿಧಾನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದು, 10 ರಲ್ಲಿ 7 ಜನ ಅಂದರೆ ಶೇ.71 ರಷ್ಟು ಜನತೆ ಈ ರೀತಿಯ ಆಡಳಿತ ವಿಧಾನವನ್ನು ಕೆಟ್ಟ ಆಡಳಿತ ವಿಧಾನ ಎಂದು ಅಭಿಪ್ರಾಯಪಟ್ಟಿದ್ದಾರೆ.  
ಭಾರತದಲ್ಲಿ ಶೇ.53 ರಷ್ಟು ಮಂದಿ ಮಿಲಿಟರಿ ಆಡಳಿತ ದೇಶಕ್ಕೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ, ಆದರೆ 50 ವರ್ಷಕ್ಕಿಂತ ಮೇಲ್ಪಟ್ಟವರು ಮಾತ್ರ ಮಿಲಿಟರಿ ಆಡಳಿತದ ವಿರುದ್ಧವಿದ್ದು, ಪ್ರಜಾಪ್ರಭುತ್ವವನ್ನು ಸ್ಥಾಪಿಸಲು ಪಟ್ಟಿರುವ ಶ್ರಮದ ಬಗ್ಗೆ ಅರಿವಿರುವ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿರಬಹುದು ಎಂದು ಪ್ಯೂ ಸಮೀಕ್ಷಾ ವರದಿ ವಿಶ್ಲೇಷಿಸಿದೆ. 
SCROLL FOR NEXT