ದೇಶ

ತೇಜಸ್ ಎಕ್ಸ್'ಪ್ರೆಸ್ ಪ್ರಯಾಣಿಕರು ಅಸ್ವಸ್ಥರಾಗಲು ಕಲುಷಿತ ಆಹಾರ ಕಾರಣವಲ್ಲ; ತನಿಖಾ ವರದಿ

Manjula VN
ನವದೆಹಲಿ: ತೇಜಸ್ ಎಕ್ಸ್'ಪ್ರೆಸ್ ರೈಲಿನಲ್ಲಿ ಪ್ರಯಾಣಿಕರು ಅಸ್ವಸ್ಥರಾದ ಪ್ರಕರಣಕ್ಕೆ ಕಲುಷಿತ ಆಹಾರ ಕಾರಣವಲ್ಲ ಎಂದು ರೈಲ್ವೇ ಇಲಾಖೆಯ ತನಿಖಾ ವರದಿಗಳು ತಿಳಿಸಿವೆ. 
ಕಳೆದ ಭಾನುವಾರ ಗೋವಾ-ಮುಂಬೈ ಮಾರ್ಗವಾಗಿ ಸಂಚರಿಸುತ್ತಿದ್ದ ತೇಜಸ್ ಎಕ್ಸ್ ಪ್ರೆಸ್ ನಲ್ಲಿ ಆಹಾರ ಸೇವಿಸಿದ್ದ 24 ಮಂದಿ ಅಸ್ವಸ್ಥರಾಗಿದ್ದರು. ರೈಲ್ವೇ ಇಲಾಖೆಯ ಬೇಜಾಬ್ದಾರಿತನದ ವಿರುದ್ಧ ಸಾಕಷ್ಟು ಟೀಕೆಗಳು ಹಾಗೂ ವಿರೋಧ ವ್ಯಕ್ತವಾಗಿದ್ದವು. 
ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಐಆರ್ ಸಿಟಿಸಿ ತನಿಖೆ ಆರಂಭಿಸಿತ್ತು. ಇದರಂತೆ ತನಿಖಾ ವರದಿಯನ್ನು ಬಹಿರಂಗಪಡಿಸಿರುವ ಇಲಾಖೆಯು, ಹವಾನಿಯಂತ್ರಿತ ಬೋಗಿಯಲ್ಲಿ ಗಾಳಿ ಕಲುಷಿತಗೊಂಡ ಕಾರಣ ಉಬ್ಬರು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ವಾಂತಿಯ ದುರ್ವಾಸನೆ ಸುತ್ತಮುತ್ತ ಹಬ್ಬಿದ್ದು ಇದರಿಂದ ಮತ್ತಿಬ್ಬರು ಮಕ್ಕಳು ವಾಂತಿ ಮಾಡಿಕೊಂಡಿದ್ದಾರೆ. ಇದು ವಾತಾವರಣವನ್ನು ಮತ್ತಷ್ಟು ಹದಗೆಡಿಸಿತ್ತು. ಇದರಂತೆ ಮತ್ತಷ್ಟು ಪ್ರಯಾಣಿಕರಿಗೂ ಹೊಟ್ಟೆ ತೊಳೆಸಿದಂತಹ ಅನುಭವವಾಗಿ ಅಸ್ವಸ್ಥಗೊಡಿದ್ದಾರೆ. ಆಹಾರದ ಗುಣಮಟ್ಟದಲ್ಲಿ ಯಾವುದೇ ಸಮಸ್ಯೆಗಳಿರಲಿಲ್ಲ ಎಂದು ತಿಳಿಸಿದೆ. 
SCROLL FOR NEXT