ದೇಶ

ಕೇವಲ ತಾಜ್'ಮಹಲ್ ಏಕೆ ಸಂಸತ್ತು, ರಾಷ್ಟ್ರಪತಿ ಭವನವನ್ನೂ ಧ್ವಂಸಗೊಳಿಸಿ: ಅಜಂಖಾನ್

Manjula VN
ನವದೆಹಲಿ: ಕೇವಲ ತಾಜ್ ಮಹಲ್ ಏಕೆ, ರಾಷ್ಟ್ರಪತಿ ಭವನ, ಕುತುಬ್ ಮಿನಾರ್, ಕೆಂಪುಕೋಟೆಯಂತಹ ಅನೇಕ ಪಾರಂಪರಿಕ ಕಟ್ಟಗಳನ್ನೂ ದೇಶದ್ರೋಹಿಗಳೇ ನಿರ್ಮಿಸಿದ್ದಾರೆ, ಅದನ್ನೂ ಧ್ವಂಸಗೊಳಿಸಿ ಎಂದು ಸಮಾಜವಾದಿ ಪಕ್ಷದ ನಾಯಕ ಅಜಂಖಾನ್ ಅವರು ಮಂಗಳವಾರ ಹೇಳಿದ್ದಾರೆ. 
ತಾಜ್ ಮಹಲ್ ಕುರಿತಂತೆ ನಿನ್ನೆಯಷ್ಟೇ ಬಿಜೆಪಿ ನಾಯಕ ಸಂಗೀತ್ ಸೋಮ್ ಅವರು ನೀಡಿದ್ದ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ತಾಜ್ ಮಹಲ್ ವೊಂದನ್ನೇ ಏಕೆ ಧ್ವಂಸಗೊಳಿಸುತ್ತೀರಿ? ಕೇವಲ ತಾಜ್ ಮಹಲ್ ನ್ನು ದೇಶದ್ರೋಹಿಗಳು ಕಟ್ಟಿಸಿಲ್ಲ. ಇಲ್ಲಿರುವ ರಾಷ್ಟ್ರಪತಿ ಭವನ, ಕುತುಬ್ ಮಿನಾರ್ ನಂತರ ಪ್ರಮುಖ ಕಟ್ಟಗಳನ್ನೂ ದೇಶದ್ರೋಹಿಗಳೇ ಕಟ್ಟಿದ್ದಾರೆ, ಹೀಗಾಗಿ ಎಲ್ಲವನ್ನೂ ಧ್ವಂಸಗೊಳಿಸಿ ಎಂದು ಹೇಳಿದ್ದಾರೆ. 
ರಾಷ್ಟ್ರಪತಿ ಭವನ, ಕುತುಬ್ ಮಿನಾರ್, ಕೆಂಪುಕೋಟೆ ಎಲ್ಲಾ ಕಟ್ಟಡಗಳೂ ಗುಲಾಮಗಿರಿಯ ಪ್ರತೀಕವಾಗಿದೆ. ಇವುಗಳನ್ನು ದೇಶದ್ರೋಹಿಗಳು ನಿರ್ಮಿಸಿದ್ದಾರೆ ಎನ್ನುತ್ತಿರುವ ಆರ್'ಎಸ್ಎಸ್, ಕೇವಲ ತಾಜ್ ಮಹಲ್ ಮಾತ್ರವಲ್ಲದೆ, ದೇಶದ್ರೋಹಿಗಳಿಂದ ನಿರ್ಮಿತವಾಗಿರುವ ಎಲ್ಲಾ ಪಾರಂಪರಿಕ ಕಟ್ಟಡಗಳನ್ನು ಧ್ವಂಸಗೊಳಿಸಲಿ ಎಂದು ಸವಾರು ಹಾಗಿದ್ದಾರೆ. 
ನಿನ್ನೆಯಷ್ಟೇ ತಾಜ್ ಮಹಲ್ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು, ಉತ್ತರಪ್ರದೇಶ ಪ್ರವಾಸೋದ್ಯಮ ಕೈಪಿಡಿಯಿಂದ ತಾಜ್'ಮಹಲ್ ಕೈಬಿಟ್ಟಿರುವುದಕ್ಕೆ ಬಹಳಷ್ಟು ಜನರಿಗೆ ಬೇಸರವಾಗಿದೆ. ಯಾವ ಇತಿಹಾಸದ ಬಗ್ಗೆ ನಾವು ಮಾತನಾಡುತ್ತಿದ್ದೇವೆ? ತಾಜ್ ಮಹಲ್ ಕಟ್ಟಿಸಿದ್ದ ಷಹಜಹಾನ್ ತನ್ನ ತಂದೆಯನ್ನೇ ಜೈಲಿಗಟ್ಟಿದ್ದ. ಹಿಂದೂಗಳನ್ನು ಇಲ್ಲವಾಗಿಸಲು ಬಯಸಿದ್ದ. ಇಂಥಹ ವ್ಯಕ್ತಿಗಳು ನಮ್ಮ ಇತಿಹಾಸದ ಭಾಗವಾದರೆ, ಇದು ಬಹಳ ಬೇಸರದ ಸಂಗತಿ. ಇಂತಹ ಇತಿಹಾಸವನ್ನು ನಾವು ಬದಲಿಸುತ್ತೇವೆ. ತಾಜ್ ಮಹಲ್ ಕಟ್ಟಡವನ್ನು ನಿರ್ಮಿಸಿದವರು ದ್ರೋಹಿಗಳಾಗಿದ್ದು, ಹೀಗಾಗಿ ಅದಕ್ಕೆ ಭಾರತೀಯ ಇತಿಹಾಸದಲ್ಲಿ ಯಾವುದೇ ಸ್ಥಾನವಿಲ್ಲ. ತಾಜ್ ಮಹಲ್ ಭಾರತೀಯ ಸಂಸ್ಕೃತಿಯಲ್ಲಿನ ಒಂದು ಕಪ್ಪು ಚುಕ್ಕೆ ಎಂದಿದ್ದರು. 
SCROLL FOR NEXT