ನಟ ಕಮಲ್ ಹಾಸನ್ 
ದೇಶ

ನೋಟು ನಿಷೇಧಕ್ಕೆ ಬೆಂಬಲ: ಜನತೆ ಬಳಿ ಕ್ಷಮೆಯಾಚಿಸಿದ ಕಮಲ್ ಹಾಸನ್

ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ ನಿರ್ಧಾರವನ್ನು ತರಾತುರಿಯಲ್ಲಿ ಬೆಂಬಲಿಸಿದ ಕಾರಣಕ್ಕೆ ನಟ ಕಮಲ್ ಹಾಸನ್ ಅವರು ಜನತೆ ಬಳಿ ಮಂಗಳವಾರ ಕ್ಷಮೆಯಾಚಿಸಿದ್ದಾರೆ...

ಚೆನ್ನೈ: ದುಬಾರಿ ನೋಟುಗಳ ಮೇಲೆ ನಿಷೇಧ ಹೇರಿದ ಕೇಂದ್ರ ಸರ್ಕಾರ ನಿರ್ಧಾರವನ್ನು ತರಾತುರಿಯಲ್ಲಿ ಬೆಂಬಲಿಸಿದ ಕಾರಣಕ್ಕೆ ನಟ ಕಮಲ್ ಹಾಸನ್ ಅವರು ಜನತೆ ಬಳಿ ಮಂಗಳವಾರ ಕ್ಷಮೆಯಾಚಿಸಿದ್ದಾರೆ. 
ತಮಿಳು ನಿಯತಕಾಲಿಕೆ ವಿಕಟನ್'ಗೆ ನೀಡಿದ ಸಂದರ್ಶದನದಲ್ಲಿ ಕೇಂದ್ರ ಸರ್ಕಾರ ನೋಡು ನಿಷೇಧ ನಿರ್ಧಾರ ಕುರಿತಂತೆ ಮಾತನಾಡಿರುವ ಅವರು, ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂಬ ಕಾರಣಕ್ಕೆ ನಾನು ನೋಟು ನಿಷೇಧ ನಿರ್ಧಾರಕ್ಕೆ ಬೆಂಬಲ ನೀಡಿದ್ದೆ. ಆದರೆ, ಆರ್ಥಿಕತೆಯನ್ನು ಅರ್ಥ ಮಾಡಿಕೊಂಡಿದ್ದ ನನ್ನ ಗೆಳೆಯರು ಹಾಗೂ ಕೆಲ ಜನರು ನನ್ನ ನಿರ್ಧಾರ ಕುರಿತಂತೆ ಟೀಕೆಗಳನ್ನು ಮಾಡಿದ್ದರು. ಆ ಬಳಿಕ ನೋಟು ನಿಷೇಧ ನಿರ್ಧಾರ ಒಳ್ಳೆಯದೇ ಆಗಿದ್ದರೂ, ಕಾರ್ಯಗತಗೊಳಿಸುವಲ್ಲಿ ಸಮಸ್ಯೆಗಳಿರುವ ಬಗ್ಗೆಯೂ ಹೇಳಿದ್ದೆ ಎಂದು ಹೇಳಿದ್ದಾರೆ. 
ಹಿಂಜರಿಕೆಯಿಲ್ಲದೆಯೇ ಪ್ರಧಾನಿ ಮೋದಿಯವರು ತಮ್ಮ ತಪ್ಪುಗಳನ್ನು ಒಪ್ಪಿಕೊಂಡಿದ್ದೇ ಆದರೆ, ಮತ್ತೊಂದು ಸಲಾಂ ಅವರಿಗಾಗಿ ಕಾದಿದೆ. ಒಬ್ಬ ಒಳ್ಳೆಯ ನಾಯಕ ಎನಿಸಿಕೊಂಡವನು ತನ್ನ ತಪ್ಪನ್ನು ಒಪ್ಪಿಕೊಳ್ಳಲೂ ಕೂಡ ಸಿದ್ದನಿರಬೇಕು. ಪ್ರಧಾನಿ ಮೋದಿ ತಮ್ಮ ತಪ್ಪನ್ನು ಯಾವುದೇ ಹಿಂಜರಿಕೆಯಿಲ್ಲದೆಯೇ ಒಪ್ಪಿಕೊಂಡಿದ್ದಾರೆ ಅವರಿಗೆ ನನ್ನದೊಂದು ಮತ್ತೊಂದು ಸಲಾಂ...ಗಾಂಧಿ ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಸ್ವಭಾವವನ್ನು ಹೊಂದಿದ್ದರು. ಅದು ಇಂದಿಗೂ ಸಾಧ್ಯವಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!