ದೇಶ

ಗೃಹಕ್ಯತ್ಯ ಕಾರ್ಮಿಕರಿಗೆ ಕನಿಷ್ಠ ಸಮಾನ ವೇತನ, ಸಾಮಾಜಿಕ ಭದ್ರತೆಗೆ ಕಾನೂನು ಜಾರಿಗೆ ಕಾರ್ಮಿಕ ಇಲಾಖೆ ಚಿಂತನೆ

Sumana Upadhyaya
ನವದೆಹಲಿ: ಗೃಹ ಕೆಲಸಗಳಲ್ಲಿ ತೊಡಗಿರುವ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಸಮಾನ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಒದಗಿಸುವ ಕಾನೂನನ್ನು ಜಾರಿಗೆ ತರಲು ಚಿಂತಿಸಿದೆ.
ಮನೆ ಕೆಲಸಗಳಲ್ಲಿ ತೊಡಗಿರುವ  ಕೆಲಸಗಾರರಿಗೆ ಕನಿಷ್ಠ ಮತ್ತು ಸಮಾನ ವೇತನ, ಸಾಮಾಜಿಕ ಭದ್ರತೆ, ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳು ಮತ್ತು ಕಾರ್ಮಿಕ ಕಾನೂನಿನಡಿಯಲ್ಲಿ  ಒಕ್ಕೂಟಗಳನ್ನು ರಚನೆ ಮಾಡಲು ಸದ್ಯದಲ್ಲಿಯೇ ಹಕ್ಕುಗಳನ್ನು ಪಡೆಯಲಿದ್ದಾರೆ.
ಗೃಹ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಕೆಲಸಗಾರರಿಗೆ ರಾಷ್ಟ್ರೀಯ ನೀತಿಗೆ ಸಂಬಂಧಪಟ್ಟಂತೆ ಜನರ ಅಭಿಪ್ರಾಯ, ಸಲಹೆಗಳನ್ನು ಪಡೆಯಲು ನವೆಂಬರ್ 16ರವರೆಗೆ ಕಾಲಾವಕಾಶ ನೀಡಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ನೌಕರರ ಸಚಿವಾಲಯ ಈ ಕುರಿತು ಅಧಿಸೂಚನೆ ಹೊರಡಿಸಿದೆ.
ಆದರೆ ಹೊಸ ಕರಡು ನೀತಿಯಲ್ಲಿ ಮನೆಗೆಲಸದವರಿಗೆ ಕನಿಷ್ಠ ವೇತನ ಎಷ್ಟು ನೀಡಬೇಕು ಎಂಬುದನ್ನು ವಿವರಿಸಿಲ್ಲ. ಈ ಹಿಂದಿನ ಕರಡು ನೀತಿಯಲ್ಲಿ ಪೂರ್ಣಾವಧಿಯ ಕುಶಲ ಕಾರ್ಮಿಕರಿಗೆ ತಿಂಗಳಿಗೆ 9,000 ರೂಪಾಯಿ ನೀಡಬೇಕೆಂದು ಪ್ರಸ್ತಾಪಿಸಲಾಗಿತ್ತು. ಅಲ್ಲದೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಡ್ಡಾಯ ರಜೆ ನೀಡಬೇಕೆಂದು ಕೂಡ ಸೌಲಭ್ಯ ಒದಗಿಸಲಾಗಿತ್ತು. 
ದಾಖಲೆಗಳ ಪ್ರಕಾರ, ಸಾಮಾಜಿಕ ಭದ್ರತೆ ನೀತಿಯಲ್ಲಿ ನ್ಯಾಯೋಚಿತ ನಿಯಮಗಳು, ದೂರು ಪರಿಹಾರ ಮತ್ತು ವಿವಾದ ಪರಿಹಾರಕ್ಕೆ ಸಾಂಸ್ಥಿಕ ಕಾರ್ಯವಿಧಾನವನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ನೀತಿಯಡಿ ಇನ್ನು ಮುಂದೆ ಗೃಹಕೃತ್ಯಗಳಲ್ಲಿ ತೊಡಗಿರುವವರು ಕಾರ್ಮಿಕ ಇಲಾಖೆಯಲ್ಲಿ ಅಥವಾ ಬೇರೆ ಸೂಕ್ತ ಕಾರ್ಯವಿಧಾನದ ಮೂಲಕ ತಮ್ಮ ಹೆಸರನ್ನು ದಾಖಲಿಸಿಕೊಂಡು ಸಾಮಾಜಿಕ ಭದ್ರತೆ ಪಡೆದುಕೊಳ್ಳಬಹುದು.
SCROLL FOR NEXT