ದೇಶ

ಉತ್ತರಪ್ರದೇಶದಲ್ಲಿ 'ರಾಮ ರಾಜ್ಯ' ಸ್ಥಾಪನೆ ನಮ್ಮ ಕನಸು: ಯೋಗಿ ಆದಿತ್ಯನಾಥ್

Vishwanath S
ಅಯೋಧ್ಯ(ಉತ್ತರಪ್ರದೇಶ): ಉತ್ತರಪ್ರದೇಶದಲ್ಲಿ ರಾಮ ರಾಜ್ಯ ಸ್ಥಾಪನೆ ಮಾಡುವುದು ನಮ್ಮ ಕನಸು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 
ಅಯೋಧ್ಯೆಯ ಸರಯೂ ನದೀ ತಟದಲ್ಲಿ ಬೃಹತ್ ದೀಪೋತ್ಸವವನ್ನು ಆಚರಿಸಲಾಗುತ್ತಿದ್ದು ಈ ಆಚರಣೆಗೆ ಯೋಗಿ ಆದಿತ್ಯನಾಥ್ ಅವರು ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಉತ್ತರಪ್ರದೇಶದಲ್ಲಿ ರಾಮರಾಜ್ಯ ಸ್ಥಾಪನೆ ನಮ್ಮ ಕನಸು. ಇನ್ನು ಅಯೋಧ್ಯೆಯು ಮಾನವತೆಯ ಪುಣ್ಯಭೂಮಿಯಾಗಿದೆ. ರಾಮರಾಜ್ಯ ಪೌರಾಣಿಕ ಪರಿಕಲ್ಪನೆಯ ಮೂಲಕ ಮಾನವತೆ ಎಂದರೇನು ಎಂಬುದನ್ನು ನಾವು ಇಡಿಯ ಜಗತ್ತಿಗೆ ಕಲಿಸಿದವರಾಗಿದ್ದೇವೆ ಎಂದರು. 
ರಾಮರಾಜ್ಯ ಸ್ಥಾಪನೆ ಮೂಲಕ ಉತ್ತರಪ್ರದೇಶವನ್ನು ಭಾರತ ಮತ್ತು ವಿಶ್ವದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲಾಗುವುದು. ಆಯೋಧ್ಯೆಯ ಅಭಿವೃದ್ಧಿಗಾಗಿ ಸರ್ಕಾರ 133 ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಿದೆ. ಇನ್ನು ಆಯೋಧ್ಯೆಯಲ್ಲಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಯೋಗಿ ಹೇಳಿದರು. 
ಭಗವಾನ್ ಶ್ರೀರಾಮನನ್ನು ವಿರೋಧಿಸುವವರು ಅಯೋಧ್ಯೆಯನ್ನು ಅಭಿವೃದ್ಧಿಪಡಿಸುವ ನಮ್ಮ ಯತ್ನಗಳನ್ನು ತಡೆಯಲಾರರು ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 
SCROLL FOR NEXT