ದೇಶ

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರು ಫೋಟೋ ಅಪ್ಲೋಡ್ ಮಾಡುವಂತಿಲ್ಲ ಕುರಿತು ಫತ್ವಾಗೆ ಮುಸ್ಲಿಂ ಮೌಲ್ವಿ ಬೆಂಬಲ

Manjula VN
ನವೆದಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು ಫೋಟೋಗಳನ್ನು ಅಪ್ಲೋಡ್ ಮಾಡುವಂತಿಲ್ಲ ಎಂಬ ಫತ್ವಾಗೆ ಮುಸ್ಲಿಂ ಮೌಲ್ವಿ ಗುರುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ. 
ಫತ್ವಾ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮುಸ್ಲಿಂ ಮೌಲ್ವಿ ಮುಫ್ತಿ ಮುಕ್ಕಾರಾಮ್ ಅವರು, ಅನಗತ್ಯ ಉದ್ದೇಶಕ್ಕಾಗಿ ಇಸ್ಲಾಂನಲ್ಲಿ ಫೋಟೋ ತೆಗೆಯುವುದು ಅಕ್ರಮವಾದದ್ದು. ಆಧಾರ್ ಕಾರ್ಡ್, ಪಾಸ್ ಪೋರ್ಟ್ ಹಾಗೂ ಅಗತ್ಯ ದಾಖಲೆಗಳಿಗಾಗಿ ಫೋಟೋಗಳನ್ನು ತೆಗೆಯುವುದು ಸರಿ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವುದಕ್ಕಾಗಿ ಹಾಗೂ ಅನಗತ್ಯ ವಿಚಾರಗಳಿಗೆ ಫೋಟೋ ತೆಗೆಯುವುದು ಸರಿಯಲ್ಲ ಎಂದು ಹೇಳಿದ್ದಾರೆ. 
ನಿನ್ನೆಯಷ್ಟೇ ಉತ್ತರ ಪ್ರದೇಶದ ಇಸ್ಲಾಮಿಕ್ ಉನ್ನತ ಶಿಕ್ಷಣ ಸಂಸ್ಥೆ ದರುಲ್ ಉಲೂಮ್ ದಿಯೋಬಂದ್ ಮಹಿಳೆಯರು ತಮ್ಮ ಫೋಟೋಗಳು ಹಾಗೂ ತಮ್ಮ ಕುಟುಂಬಸ್ಥರ ಫೋಟೋಗಳನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಬಾರದು ಎಂದು ಫತ್ವಾವೊಂದರನ್ನು ಹೊರಡಿಸಿತ್ತು. 
SCROLL FOR NEXT