ಕರಾಚಿ: ಪಾಕಿಸ್ತಾನ ಸಮುದ್ರದ ಗಡಿಯನ್ನು ಅಕ್ರಮವಾಗಿ ಉಲ್ಲಂಘಿಸಿದ್ದಾರೆಂಬ ಆರೋಪದ ಮೇರೆಗೆ 25 ಭಾರತೀಯ ಮೀನುಗಾರರನ್ನು ಪಾಕಿಸ್ತಾನ ಅಧಿಕಾರಿಗಳು ಬಂಧನಕ್ಕೊಳಪಡಿಸಿದ್ದಾರೆಂದು ಬುಧವಾರ ತಿಳಿದುಬಂದಿದೆ.
ಭಾರತದ ಮೀನುಗಾರರು ಪಾಕಿಸ್ತಾನ ಗಡಿ ಪ್ರದೇಶವನ್ನು ದಾಟಿ ಬಂದಿದ್ದರ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 25 ಭಾರತೀಯ ಮೀನುಗಾರರನ್ನು ಬಂಧನಕ್ಕೊಳಪಡಿಸಿ, ನಾಲ್ಕು ಬೋಟುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪಾಕಿಸ್ತಾನ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಅರೇಬಿಯಾ ಸಮುದ್ರ ಗಡಿಯಲ್ಲಿ ಭಾರತೀಯ ಮೀನುಗಾರರು ಅಕ್ರಮವಾಗಿ ಮೀನುಗಾರಿಕೆ ನಡೆಸುತ್ತಿದ್ದರು ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯದ ಅಧಿಕಾರಿ ಪರ್ಹತ್ ಖಾನ್ ಅವರು ಹೇಳಿದ್ದಾರೆ.
ಪಾಕಿಸ್ತಾನ ಸಮುದ್ರ ಭಾಗದಿಂದ ಹೋಗುವಂತೆ ಹಲವು ಬಾರಿ ಎಚ್ಚರಿಕೆಗಳನ್ನು ನೀಡಲಾಗಿತ್ತು. ಬಳಿಕ ನಾಲ್ವು ವಿವಿಧ ಕಾರ್ಯಾಚರಣಗಳಲ್ಲಿ 25 ಮೀನುಗಾರರನ್ನು ಬಂಧನಕ್ಕೊಳಪಡಿಸಲಾಯಿತು ಎಂದಿದ್ದಾರೆ.