ನವದೆಹಲಿ: ಮೆರ್ಸಲ್ ಚಿತ್ರದಲ್ಲಿ ಜಿಎಸ್ ಟಿ, ಡಿಜಿಟಲ್ ಇಂಡಿಯ ಬಗ್ಗೆ ಇರುವ ಸಂಭಾಷಣೆಗಳಿಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿರುವ ಬೆನ್ನಲ್ಲೇ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.
ಚಿತ್ರದ ಸಂಭಾಷಣೆಗೆ ವಿರೋಧ ವ್ಯಕ್ತಪಡಿಸಿ, ಹಸ್ತಕ್ಷೇಪ ಮಾಡುವ ಮೂಲಕ ತಮಿಳನಾಡಿನ ಜನತೆಯ ಹೆಮ್ಮೆಯನ್ನು ಕುಗ್ಗಿಸದಂತೆ ಪ್ರಧಾನಿ ಮೋದಿಗೆ ರಾಹುಲ್ ಒತ್ತಾಯಿಸಿದ್ದಾರೆ. ಸಿನಿಮಾ ತಮಿಳು ಸಂಸ್ಕೃತಿ ಹಾಗೂ ಭಾಷೆಯ ಅಭಿವ್ಯಕ್ತಿಯಾಗಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದೇ ವೇಳೆ ನಟನ ಧರ್ಮದ ಕುರಿತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹೆಚ್ ರಾಜ ಮಾಡಿದ್ದ ಟ್ವೀಟ್ ಗೂ ವಿರೋಧ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲದೇ ಮೆರ್ಸಲ್ ವಿಜಯ್ ಅವರಿಗೆ ಆರ್ಥಿಕ ವಿಷಯಗಳಲ್ಲಿರುವ ಅಜ್ಞಾನವನ್ನೂ ತೋರಿಸುತ್ತದೆ ಎಂದು ಹೇಳಿದ್ದರು.