ಶ್ರೀನಗರ: ಕಾಶ್ಮೀರದಲ್ಲಿ ಹೆಣ್ಣುಮಕ್ಕಳ ತಲೆಕೂದಲು ಕತ್ತರಿಸುವ ಘಟನೆಗಳನ್ನು ವಿರೋಧಿಸಿ ಕಾಶ್ಮೀರ ಪ್ರತ್ಯೇಕತಾವಾದಿಗಳು ಪ್ರತಿಭಟನೆಗೆ ಕರೆ ನೀಡಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಶ್ರೀನಗರದಲ್ಲಿ ನಿರ್ಬಂಧ ವಿಧಿಸಿದ್ದಾರೆ.
ನೌಹಟ್ಟಾ, ಎಂ.ಆರ್ ಗಂಜ್, ರಾಣಿವಾರಿ, ಖನ್ಯಾರ್, ಸಾಫಾ ಕಾದಲ್, ಮೈಸುಮಾ ಹಾಗೂ ಕ್ರಾಲ್ಖಡ್ ಗಳಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಹಿಳೆಯರ ತಲೆ ಕೂದಲು ಕತ್ತರಿಸುವವರನ್ನು ಮಸೀದಿಯ ವಶಕ್ಕೆ ಒಪ್ಪಿಸಬೇಕೆಂದು ಪ್ರತ್ಯೇಕತಾವಾದಿಗಳು ಜನತೆಗೆ ಕರೆ ನೀಡಿದ್ದಾರೆ.
ಅಧಿಕಾರಿಗಳು ನಿರ್ಬಂಧ ವಿಧಿಸಿರುವುದರಿಂದ ಬಹುತೇಕ ಎಲ್ಲಾ ಸಾರ್ವಜನಿಕ ಸಾರಿಗೆ, ಶಿಕ್ಷಣ ಸಂಸ್ಥೆ, ಅಂಗಡಿಗಳು ಬಂಡ್ ಆಗಿವೆ.