ಸ್ಯಾನ್ ಫ್ರಾನ್ಸಿಸ್ಕೋ: ಒಂದು ಬಿಲಿಯನ್ ಗ್ರಾಹಕರನ್ನು ಹೊಂದಿರುವ ವಾಟ್ಸ್ ಆಪ್ ಗ್ರಾಹಕರಿಗೆ ಹೊಸ ವೈಶಿಷ್ಟ್ಯಗಳನ್ನು ನೀಡಲು ಮುಂದಾಗಿದ್ದು, ಆಂಡ್ರಾಯ್ಡ್ ನ ಹೊಸ ಆವೃತ್ತಿಯಲ್ಲಿ ಗ್ರೂಪ್ ವಾಯ್ಸ್ ಕರೆ ಸೌಲಭ್ಯವನ್ನು ನೀಡುತ್ತಿದೆ.
ವಾಟ್ಸ್ ಆಪ್ ಸಂಸ್ಥೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇನ್ನೂ ಹಲವು ವೈಶಿಷ್ಟ್ಯಗಳು ವಾಟ್ಸ್ ಆಪ್ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಹೇಳಿದೆ. ಗ್ರೂಪ್ ವಾಯ್ಸ್ ಕರೆ ಸೌಲಭ್ಯ ನೀಡುವ ಸುದ್ದಿ ಆಂತರಿಕ ವಲಯದಲ್ಲಷ್ಟೇ ತಿಳಿದಿತ್ತು. ಈಗ ಅದನ್ನು ಬಹಿರಂಗಗೊಳಿಸಲಾಗಿದೆ. ಅಷ್ಟೇ ಅಲ್ಲದೇ ಹೊಸ ವೈಶಿಷ್ಟ್ಯಗಳಿಗೆ ಸಂಬಂಧಿಸಿದಂತೆ ಇನ್ನೂ ಹಲವಾರು ಅಚ್ಚರಿಗಳು ಗ್ರಾಹಕರಿಗೆ ಕಾದಿವೆ ಎಂದು ವಾಟ್ಸ್ ಆಪ್ ತಿಳಿಸಿದೆ.
ಹೊಸ ಆವೃತ್ತಿಯಲ್ಲಿ ವಿವಿಧ ರೀತಿಯ ವೈಶಿಷ್ಟ್ಯಗಳನ್ನು ವಾಟ್ಸ್ ಆಪ್ ನೀಡುತ್ತಿದ್ದು, ವಾಟ್ಸ್ ಆಪ್ ಗ್ರೂಪ್ ಅಡ್ಮಿನ್ ಗಳಿಗೆ ಮತ್ತಷ್ಟು ಅಧಿಕಾರ ನೀಡುವುದು, ಗ್ರೂಪ್ ಮ್ಯಾನೇಜ್ಮೆಂಟ್ ಸುಧಾರಣೆಗೂ ಹೆಚ್ಚು ಒತ್ತು ನೀಡಲಿದೆ.