ನವದೆಹಲಿ: ಸೆಪ್ಟೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆ ಸಂಗ್ರಹ 92,150 ಕೋಟಿಗೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸುಮಾರು 42.91 ಲಕ್ಷ ಉದ್ಯಮದಿಂದ ಸಂಗ್ರಹವಾಗಿರುವ ತೆರಿಗೆಯ ಪೈಕಿ 14,042 ಕೋಟಿ ರೂಪಾಯಿ ಸೆಂಟ್ರಲ್ ಜಿಎಸ್ ಟಿಯಿಂದ ಸಂಗ್ರಹವಾಗಿದ್ದು, 21,172 ಕೋಟಿ ರಾಜ್ಯ ಜಿಎಸ್ ಟಿಯಿಂದ ಸಂಗ್ರವಾಗಿದೆ. ಇಂಟಿಗ್ರೇಟೆಡ್ ಜಿಎಸ್ ಟಿ 48,948 ಕೋಟಿಯಷ್ಟಿದ್ದು, ಇಂಟಿಗ್ರೇಟೆಡ್ ಜಿಎಸ್ ಟಿಯಲ್ಲಿ 23,951 ಕೋಟಿ ಆಮದಿಗೆ ಸಂಬಂಧಪಟ್ಟದ್ದಾಗಿದೆ.
ಕಾಂಪನ್ಸೇಷನ್ ಸೆಸ್ ನ ಅಡಿಯಲ್ಲಿನ ಸಂಗ್ರಹ 7,988 ಕೋಟಿಯಷ್ಟಿದ್ದು, ಈ ಪೈಕಿ 722 ಕೋಟಿ ಕಾಂಪನ್ಸೇಷನ್ ಸೆಸ್ ಆಮದಿನಿಂದ ಸಂಗ್ರಹವಾಗಿದೆ, ಅ.23 ರ ವರೆಗೆ ಒಟ್ಟು 42.91 ಲಕ್ಷ ವ್ಯಾಪಾರ ಸಂಸ್ಥೆಗಳು ಸೆಪ್ಟೆಂಬರ್ ತಿಂಗಳ ಜಿಎಸ್ ಟಿಆರ್-3B ರಿಟರ್ನ್ಸ್ ನ್ನು ಸಲ್ಲಿಕೆ ಮಾಡಿವೆ. ಜುಲೈ ಹಾಗೂ ಆಗಸ್ಟ್ ಜಿಎಸ್ ಟಿ ಸಂಗ್ರಹ ಅನುಕ್ರಮವಾಗಿ 95,000 ಕೋಟಿ ಹಾಗೂ 91,000 ಕೋಟಿಯಷ್ಟಿತ್ತು.