ದೇಶ

ಮನನಷ್ಟ ಮೊಕದ್ದಮೆ: ದಿ ವೈರ್ ಸಂಪಾದಕರಿಗೆ ಗುಜರಾತ್ ಕೋರ್ಟ್ ನಿಂದ ಸಮನ್ಸ್

Srinivas Rao BV
ಅಹಮದಾಬಾದ್: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಪುತ್ರ ಜಯ್ ಶಾ ದಿ ವೈರ್ ಸುದ್ದಿ ಜಾಲತಾಣದ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಪಟ್ಟಂತೆ ಗುಜರಾತ್ ನ ಮೆಟ್ರೋಪಾಲಿಟನ್ ಕೋರ್ಟ್ ದಿ ವೈರ್ ಸುದ್ದಿ ಜಾಲತಾಣದ ಸಂಪಾದಕರಿಗೆ ಸಮನ್ಸ್ ಜಾರಿ ಮಾಡಿದೆ. 
ನವೆಂಬರ್ 13 ರೊಳಗೆ ಕೋರ್ಟ್ ಎದುರು ಹಾಜರಾಗಬೇಕೆಂದು ದಿ ವೈರ್ ಸಂಪಾದಕರಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಜಯ್ ಶಾ ಅವರು ಹಾಜರಿಪಡಿಸಿದ್ದ ಇಬ್ಬರು ಸಾಕ್ಷಿಗಳ ಹೇಳಿಕೆಯನ್ನು ಮೆಟ್ರೋಪಾಲಿಟನ್ ಕೋರ್ಟ್ ನ ನ್ಯಾಯಾಧೀಶರಾದ ಎಸ್ ಕೆ ಗಾಧ್ವಿ ದಾಖಲಿಸಿಕೊಂಡಿದ್ದು, ಮೇಲ್ನೋಟಕ್ಕೆ ಆರೋಪ ಕಂಡುಬರುತ್ತಿದೆ ಎಂದು ಹೇಳಿದ್ದಾರೆ. 
ತಮ್ಮ ಕಕ್ಷಿದಾರರಿಗೆ ಪ್ರತಿಕ್ರಿಯೆಯನ್ನೂ ನೀಡುವುದಕ್ಕ ಅವಕಾಶ ನೀಡದೇ ಆತುರದಲ್ಲಿ ದಿ ವೈರ್ ಸುದ್ದಿ ಜಾಲತಾಣ ವರದಿಯನ್ನು ಪ್ರಕಟಿಸಿದೆ. ವರದಿಯ ಉದ್ದೇಶ ಇದ್ದದ್ದು ಸತ್ಯವನ್ನು ಹೊರತರುವುದಲ್ಲ, ಬದಲಾಗಿ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವಿಷಯವನ್ನು ಸೃಷ್ಟಿಸುವುದು ಎಂದು ಜಯ್ ಶಾ ಪರ ವಕೀಲ ಎಸ್ ವಿ ರಾಜು ವಾದ ಮಂಡಿಸಿದ್ದಾರೆ. 
ಅಮಿತ್ ಶಾ ಅವರ ಪುತ್ರ ಜಯ್ ಶಾ ಅವರ ಆಸ್ತಿ ಕಡಿಮೆ ಅವಧಿಯಲ್ಲಿ ಅಪಾರ ಪ್ರಮಾಣದಲ್ಲಿ ಏರಿಕೆಯಾಗಿರುವುದರ ಬಗ್ಗೆ ದಿ ವೈರ್ ಸುದ್ದಿ ಜಾಲತಾಣ ವರದಿ ಪ್ರಕಟಿಸಿತ್ತು.  
SCROLL FOR NEXT