ಚೆನ್ನೈ: ಖ್ಯಾತ ಮಲಯಾಳಂ ಚಲನಚಿತ್ರ ನಿರ್ದೇಶಕ ಐ.ವಿ.ಶಶಿ (69) ಇಂದು ಬೆಳಿಗ್ಗೆ ಚೆನ್ನೈನಲ್ಲಿ ನಿಧನರಾದರು.
ಸುಮಾರು 150 ಚಲನಚಿತ್ರಗಳನ್ನು ನಿರ್ದೇಶಿಸಿದ್ದ ಇವರು ಮಲಯಾಳಂ ನಟಿ ಸೀಮಾ ಅವರನ್ನು ವಿವಾಹವಾಗಿದ್ದರು. ಇದೀಗ ಶಶಿ ಪತ್ನಿ ಓರ್ವ ಮಗಳು ಮತ್ತು ಒಬ್ಬ ಮಗನನ್ನು ಅಗಲಿದ್ದಾರೆ.
ಐವಿ ಶಶಿ ಮಲಯಾಳಂ ಚಿತ್ರರಂಗದಲ್ಲಿ ಹಿಟ್ ನಿರ್ದೇಶಕರೆಂದು ಖ್ಯಾತಿ ಗಳಿಸಿದ್ದರು. ಅವರು ಮಲಯಾಳಂನ ಖ್ಯಾತ ನಟರಾದ ಮುಮ್ಮಟ್ಟಿ, ಮೋಹನ್ ಲಾಲ್ ಚಿತ್ರಗಳನ್ನು ನಿರ್ದೇಶನ ಮಾಡಿದ್ದರು. 'ಅತೀರಾತ್ರಂ', 'ಅವನಾಳಿ', 'ಇನ್ಸ್ ಪೆಕ್ಟರ್ ಬಲರಾಮ್', 'ಅವಲುಡೆ ರಾವುಕಳ್'ಿವು ಶಶಿ ನಿರ್ದೇಶನದಲ್ಲಿ ಮೂಡಿ ಬಂದ ಕೆಲವು ಶ್ರೇಷ್ಠ ಚಿತ್ರಗಳಾಗಿವೆ.
28 ಮಾರ್ಚ್ 1948 ರಂದು ಜನಿಸಿದ ಇರುಪ್ಪನ್ ವೀಡು ಶಶಿಧರನ್ ತಮ್ಮ 27 ನೇ ವಯಸ್ಸಿನಲ್ಲಿ 'ಉಸ್ಲಾವಂ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. 1992 ರಲ್ಲಿ,ಶಶಿ ತಮ್ಮ 'ಆರೂಢಮ್' ಚಿತ್ರಕ್ಕಾಗಿ ಪ್ರತಿಷ್ಠಿತ ನರ್ಗೀಸ್ ದತ್ ರಾಷ್ಟ್ರೀಯ ಪುರಸ್ಕಾರಕ್ಕೆ ಪಾತ್ರರಾದರು. ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ 2015 ರಲ್ಲಿ ಜೆಸಿ ಡೇನಿಯಲ್ ಪ್ರಶಸ್ತಿ ಶಶಿ ಪಾಲಿಗೆ ಒಲಿದಿತ್ತು.