ಲಖನೌ: ಐತಿಹಾಸಿಕ ಸ್ಮಾರಕ ತಾಜ್ ಮಹಲ್‌ಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿ ಇದು ಶ್ರೀರಾಮನ ಕಮಾಲ್ ಎಂದು ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಬಣ್ಣಿಸಿದ್ದಾರೆ.
ತಾಜ್ ಮಹಲ್ ಒಂದು ಪಾರಂಪರಿಕ ತಾಣ ಎಂದು ಬಿಜೆಪಿ ಪರಿಗಣನೆಗೆ ತೆಗೆದುಕೊಂಡಿಲ್ಲ. ಆದರೆ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳು ಮಾತ್ರ ತಾಜ್ ಮಹಲ್ ಗೆ ಭೇಟಿ ನೀಡಿ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ. ನೋಡಿ ಸಮಯ ಹೇಗೆ ಬದಲಾಗುತ್ತದೆ ಎಂದು ಅಖಿಲೇಶ್ ಲೇವಡಿ ಮಾಡಿದ್ದಾರೆ.
ಸದ್ಯ ಸಮಾಜವಾದಿ ಪಕ್ಷದ ಕಾರ್ಯಕರ್ತರು ಆಗ್ರದಿಂದ ಇಲ್ಲಿಗೆ ಬಂದಿರುವುದು ಒಳ್ಳೆಯದಾಯಿತು. ಇಲ್ಲದಿದ್ದರೆ ತಾಜ್ ಮಹಲ್ ನ ಪಶ್ಚಿಮ ಗೇಟ್ ಬಳಿಕ ಪೊರಕೆ ಹಿಡಿದು ಸ್ವಚ್ಛತ ಅಭಿಮಾನ ನಡೆಸಬೇಕಿತ್ತು. ಸದ್ಯ ಯೋಗಿ ಅವರು ಪೊರಕೆ ಹಿಡಿದು ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು ಇದೆಲ್ಲಾ ಭಗವಂತ ಶ್ರೀರಾಮನ ಕೃಪೆ ಎಂದು ಹೇಳಿದ್ದಾರೆ.
ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಖ್ ಯಾದವ್ ಅವರು ಕಳೆದ ಎರಡು ವರ್ಷಗಳ ಹಿಂದೆ ವ್ಯಾಲಂಟೈನ್ ಡೇ ದಿನ ಪತ್ನಿ ಡಿಂಪಲ್ ಯಾದವ್ ಜತೆ ತಾಜ್ ಮಹಲ್ ಗೆ ಭೇಟಿ ನೀಡಿದ್ದರು.
ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಉತ್ತರ ಪ್ರದೇಶದ ಪ್ರವಾಸಿತಾಣಗಳ ಪಟ್ಟಿಯಿಂದ ತಾಜ್ ಮಹಲ್ ಅನ್ನು ತೆಗೆದು ಹಾಕಿತ್ತು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತಲ್ಲದೇ ತಾಜ್ ಮಹಲ್ ಪರ-ವಿರೋಧ ಚರ್ಚೆಗಳಿಗೂ ದಾರಿ ಮಾಡಿಕೊಟ್ಟಿತ್ತು. ತಾಜ್ ಮಹಲ್ ಕುರಿತ ವಿವಾದಗಳು ಭುಗಿಲೆದ್ದ ಬಳಿಕ ಇದೇ ಮೊದಲ ಬಾರಿಗೆ ಸಿಎಂ ಯೋಗಿ ಆದಿತ್ಯನಾಥ್ 17ನೇ ಶತಮಾನದ ಐತಿಹಾಸಿಕ ಕಟ್ಟಡ ತಾಜ್ ಮಹಲ್ ಗೆ ಭೇಟಿ ನೀಡಿದ್ದಾರೆ.