ಗೀತಾ 
ದೇಶ

ಪಾಕ್'ನಿಂದ ಭಾರತಕ್ಕೆ ಮರಳಿದ್ದ ಗೀತಾ ಭೇಟಿಯಾಗಲಿರುವ ಜಾರ್ಖಂಡ್ ದಂಪತಿ

ಪಾಕಿಸ್ತಾನದಿಂದ ತಾಯಿನಾಡು ಭಾರತಕ್ಕೆ ಮರಳಿದ್ದ ಗೀತಾ ನಮ್ಮ ಪುತ್ರಿ ಎಂದು ಹೇಳಿದ್ದ ಜಾರ್ಖಾಂಡ್ ದಂಪತಿ ಕುರಿತ ಮಾಹಿತಿಗಳನ್ನು ಇಂದೋರ್ ಜಿಲ್ಲಾಧಿಕಾರಿಗಳು ಪರಿಶೀನೆ ನಡೆಸುತ್ತಿದ್ದಾರೆಂದು...

ಇಂದೋರ್: ಪಾಕಿಸ್ತಾನದಿಂದ ತಾಯಿನಾಡು ಭಾರತಕ್ಕೆ ಮರಳಿದ್ದ ಗೀತಾ ನಮ್ಮ ಪುತ್ರಿ ಎಂದು ಹೇಳಿದ್ದ ಜಾರ್ಖಂಡ್ ದಂಪತಿ ಕುರಿತ ಮಾಹಿತಿಗಳನ್ನು ಇಂದೋರ್ ಜಿಲ್ಲಾಧಿಕಾರಿಗಳು ಪರಿಶೀನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 
2015ರ ಅಕ್ಟೋಬರ್ ನಲ್ಲಿ ಪಾಕಿಸ್ತಾನದಿಂದ ಭಾರತಕ್ಕೆ ಮರಳಿದ್ದ ಗೀತಾ, ಪ್ರಸ್ತುತ ಇಂದೋರ್ ನಲ್ಲಿ ಮೂಕ ಹಾಗೂ ಕಿವುಡರಿಗಾಗಿ ಇರುವ ಸಂಸ್ಥೆಯಲ್ಲಿದ್ದಾಳೆ. ಗೀತಾ ಭಾರತಕ್ಕೆ ಮರಳಿದ ಬಳಿಕ ಈ ವರೆಗೂ 10ಕ್ಕೂ ಹೆಚ್ಚು ದಂಪತಿಗಳು ಗೀತಾ ತಮ್ಮ ಪುತ್ರಿಯೆಂದು ಹೇಳಿಕೊಂಡಿದ್ದರು. ಆದರೆ, ಗೀತಾ ತಮ್ಮ ಪುತ್ರಿಯೇ ಎಂಬುದನ್ನು ಈ ವರೆಗೂ ಯಾರೊಬ್ಬರೂ ಸಾಬೀತು ಪಡಿಸಿಲ್ಲ. 
ಹಿರಿಯ ಅಧಿಕಾರಿ ಮಾತನಾಡಿ, ವಿದೇಶಾಂಗ ಸಚಿವಾಲಯದ ಜೊತೆಗೆ ಚರ್ಚೆ ನಡೆಸಲಾಗಿದ್ದು, ಪ್ರಸ್ತುತ ಗೀತಾ ನಮ್ಮ ಪುತ್ರಿಯೆಂದು ಹೇಳುತ್ತಿರುವ ಜಾರ್ಖಾಂಡ್ ದಂಪತಿಗಳು ಹಾಗೂ ಗೀತಾ ಅವರ ಭೇಟಿಗೆ ಅ.27 ರಂದು ವ್ಯವಸ್ಥೆ ಮಾಡಲಾಗಿದೆ. ಅಗತ್ಯ ಬಿದ್ದರೆ, ಗೀತಾ ಹಾಗೂ ದಂಪತಿಗಳ ಡಿಎನ್ಎ ಪರೀಕ್ಷೆಯನ್ನು ಮಾಡಲಾಗುತ್ತದೆ ಎಂದು ಹೇಳಿದ್ದಾರೆ. 
ಜಾರ್ಖಂಡ್'ನ ಗರ್ವಾ ಜಿಲ್ಲೆಯ ಬಂದು ಗ್ರಾಮ ನಿವಾಸಿಗಳಾಗಿರುವ ವಿಜಯ್ ರಾಮ್ ಹಾಗೂ ಅವರ ಪತ್ನಿ ಮಾಲಾ ದೇವಿ ಎಂಬ ದಂಪತಿಗಳು ಈ ಹಿಂದೆ ಗೀತಾ ನಮ್ಮ ಪುತ್ರಿಯೆಂದು ಹೇಳಿಕೊಂಡಿದ್ದರು. ತುನ್ನಿ ಕುಮಾರಿ ಅಲಿಯಾಸ್ ಗುಡ್ಡಿ ನಮ್ಮ ಪುತ್ರಿ 9 ವರ್ಷಗಳ ಹಿಂದೆ ಬಿಹಾರದ ರೊಹ್ತಾಸ್ ಜಿಲ್ಲೆಯಿಂದ ಕಣ್ಮರೆಯಾಗಿದ್ದಳು ಎಂದು ಹೇಳಿಕೊಂಡಿದ್ದರು. 
ಸಂಜ್ಞಾ ಭಾಷೆ ತಜ್ಞ ಜ್ಞಾನೇಂದ್ರ ಪುರೋಹಿತ್ ಅವರು ಮಾತನಾಡಿ, ಗೀತಾ ಪಾಕಿಸ್ತಾನದಲ್ಲಿದ್ದಾಗ ನನ್ನೊಂದಿಗೆ ವಿಡಿಯೋ ಕಾಲ್ ಮೂಲಕ ಸಂವಹನ ನಡೆಸುತ್ತಿದ್ದಳು. ಆಕೆಯ ಭಾಷೆಯನ್ನು ನೋಡಿದರೆ, ಆದರೆ ಜಾರ್ಖಂಡ್ ಅಥವಾ ತೆಲಂಗಾಣ ಮೂಲದವಳೆಂದು ಅನಿಸುತ್ತಿದೆ. ಪಾಕಿಸ್ತಾನದಲ್ಲಿದ್ದ ಸಂದರ್ಭದಲ್ಲಿಯೇ ವಾಟ್ಸ್ ಅಪ್ ಮೂಲಕವೇ ಆಕೆ ನನಗೆ ಪತ್ರಿಕೆಯೊಂದರ ಚಿತ್ರವೊಂದನ್ನು ನನಗೆ ಕಳುಹಿಸಿದ್ದಳು. ಪೇಪರ್ ನಲ್ಲಿ ಆಕೆ ಬಂದೊ ಎಂಬ ಪದವನ್ನು ಹಿಂದಿಯಲ್ಲಿ ಬರೆದಿದ್ದಳು. ಅಲ್ಲದೆ, ಆಕೆ ಗಡ್ಡಿ ಎಂದು ತನ್ನ ಹೆಸರನ್ನು ಬರೆದಿದ್ದಳು ಎಂದು ಹೇಳಿದ್ದಾರೆ. 
ಕೆಲ ದಿನಗಳ ಹಿಂದಷ್ಟೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಗೀತಾ ಕುರಿತಂತೆ ಭಾವನಾತ್ಮಕ ಮನವಿಯೊಂದನ್ನು ಮಾಡಿಕೊಂಡಿದ್ದರು. ಗೀತಾ ಪೋಷಕರನ್ನು ಹುಡುಕಿಕೊಡುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ, ಗೀತಾಳ ಪೋಷಕರನ್ನು ಹುಡುಕಿಕೊಟ್ಟವರಿಗೆ ರೂ.1 ಲಕ್ಷ ಬಹುಮಾನ ನೀಡುವುದಾಗಿಯೂ ಘೋಷಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

SIR ವಿರುದ್ಧ ಪ್ರತಿಭಟನೆ ಮುಂದುವರೆಸುತ್ತೆವೆ: ರಾಜಕೀಯ, ಜನಸಾಮಾನ್ಯರ ಪ್ರತಿರೋಧಕ್ಕೇ ಜಯ': ರಾಹುಲ್ ಗಾಂಧಿ

‘ಸಿದ್ದರಾಮಯ್ಯಗೆ CD ತೋರಿಸಿ ರಾಜೀನಾಮೆ ಪಡೆದಿದ್ದಾರೆ’: ಯತ್ನಾಳ್​ ಸ್ಫೋಟಕ ಆರೋಪ

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!