ಪ್ರಧಾನಮಂತ್ರಿ ನರೇಂದ್ರ ಮೋದಿ
ನವದೆಹಲಿ: ನೂತನ ಗ್ರಾಹಕ ಸುರಕ್ಷತಾ ಕಾಯ್ದೆಯನ್ನು ಶೀಘ್ರದಲ್ಲಿಯೇ ಜಾರಿಗೆ ತರಲಾಗುವುದು ಹಾಗೂ ತಪ್ಪು ಹಾದಿಗೆಳೆಯುವ ಜಾಹೀರಾತುಗಳ ವಿರುದ್ಧ ಕಠಿಣ ನಿಯಮಾವಳಿಗಳನ್ನು ರೂಪಿಸಲಾಗುವುದು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಗ್ರಾಹಕರ ಸುರಕ್ಷತೆಯ ಬಗೆಗಿನ ಅಂತರಾಷ್ಟ್ರೀಯ ಕಾನ್ಫರೆನ್ಸ್ ಉದ್ದೇಶಿಸಿ ಮಾತನಾಡಿರುವ ಅವರು, ಗ್ರಾಹಕರ ಸಬಲೀಕರಣ ಅತ್ಯಂತ ಭಾಗ. ತಪ್ಪು ಹಾದಿಗೆಳೆಯುವ ಜಾಹೀರಾತುಗಳ ಮಾರ್ಗಸೂಚಿಗಳನ್ನು ಕಠಿಣಗೊಳಿಸಲಾಗುತ್ತದೆ. ಈ ಕುರಿತು ಶೀಘ್ರದಲ್ಲಿಯೇ ನೂತನ ಗ್ರಾಹಕ ಸುರಕ್ಷತಾ ಕಾಯ್ದೆಯನ್ನು ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಗ್ರಾಹಕರ ಸುರಕ್ಷತೆ ನಮಮ ಸರ್ಕಾರ ಹೆಚ್ಚಿನ ಆದ್ಯತೆಯನ್ನು ನೀಡಲಿದೆ. ಗ್ರಾಹಕರ ಅಭ್ಯಾಸ ಮತ್ತು ಗ್ರಾಹಕ ಸಮೃದ್ದಿಯತ್ತ ಗ್ರಾಹಕರ ಸುರಕ್ಷತೆಯನ್ನು ಕೊಂಡೊಯ್ಯಲಿದ್ದೇವೆ. ತಪ್ಪು ಹಾದಿಗೆಳೆಯುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದೇವೆ. ಗ್ರಾಹಕರ ಸಬಲೀಕರಣ ಮತ್ತು ಗ್ರಾಹಕರು ಯಾವುದೇ ರೀತಿಯ ಸಮಸ್ಯೆಗಳು ಅನುಭವಿಸದಂತೆ ಮಾಡಲು ಗಮನ ಹರಿಸಲಾಗುತ್ತಿದೆ. ತಂತ್ರಜ್ಞಾನವನ್ನು ಬಳಸಿ ಗ್ರಾಹಕರ ಕುಂದುಕೊರತೆಗಳನ್ನು ನೀಗಿಸುವತ್ತ ಪ್ರಯತ್ನಗಳನ್ನು ನಡೆಸುತ್ತಿದ್ದೇವೆಂದು ತಿಳಿಸಿದ್ದಾರೆ.
ಇದೇ ವೇಳೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್'ಟಿ) ಕುರಿತಂತೆ ಮಾತನಾಡಿರುವ ಅವರು, ಜಿಎಸ್'ಟಿ ಜಾರಿಗೆ ತಂದ ಪರಿಣಾಮ ಇದೀಗ ಪರೋಕ್ಷ ಹಾಗೂ ಗುಪ್ತ ತೆರಿಗೆಗಳನ್ನು ಸಂಗ್ರಹಿಸಲಾಗುತ್ತಿದೆ. ಹೊಸ ತೆರಿಗೆ ವ್ಯವಸ್ಥೆಯ ದೊಡ್ಡ ಫಲಾನುಭವಿಗಳು ಗ್ರಾಹಕರು, ಮಧ್ಯಮ ವರ್ಗದ ಜನರಾಗಿದ್ದಾರೆ. ಜಿಎಸ್'ಟಿ ಕಂಪನಿಗಳ ನಡುವೆ ಸ್ಪರ್ಧೆ ಏರ್ಪಡುವಂತೆ ಮಾಡುತ್ತಿದೆ. ಇದರಿಂದ ಸರಕುಗಳ ಮೇಲಿನ ಬೆಲೆ ಕಡಿಮೆಯಾಗಲಿದೆ. ಇದರಿಂದ ಬಡವಲು, ಮಧ್ಯಮವರ್ಗದ ಜನರು ಹಾಗೂ ಗ್ರಾಹಕರಿಲೆ ಲಾಭವಾಗಲಿದೆ ಎಂದಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos