ನವದೆಹಲಿ: ಇದೇ ಮೊದಲ ಬಾರಿಗೆ ಅಮೆರಿಕಾದ ಬಿಲಿಯನೇರ್ ಗಳ ಸಂಖ್ಯೆಯನ್ನು ಏಷ್ಯಾ ಹಿಂದಿಕ್ಕಿದ್ದು, ವಿಶ್ವದ ಶೇ.75 ರಷ್ಟು ಜನರು ಭಾರತ ಹಾಗೂ ಚೀನಾದವರಾಗಿದ್ದಾರೆ.
ಚೀನಾದಲ್ಲಿ ಪ್ರತಿ ಮೂರು ವಾರದಲ್ಲಿಯೂ ಓರ್ವ ಬಿಲಿಯನೇರ್ ಸೃಷ್ಟಿಯಾಗುತ್ತಾನೆ, ಆದ್ದರಿಂದ ಚೀನಾದಲ್ಲಿ ಬಿಲಿಯನೇರ್ ಗಳ ಸಂಖ್ಯೆ ಹೆಚ್ಚಿದೆ. ಈಗಿನ ಗತಿಯಲ್ಲೇ ಸಾಗಿದರೆ ನಾಲ್ಕು ವರ್ಷಗಳಲ್ಲಿ ಏಷ್ಯಾ ವಿಶ್ವದ ಸಂಪತ್ತಿನಲ್ಲಿ ಅಮೆರಿಕಾವನ್ನು ಹಿಂದಿಕ್ಕಲಿದೆ ಎಂದು ಯುಬಿಎಸ್ ಹಾಗು ಪ್ರೈಸ್ವಾಟರ್ಹೌಸ್ ಕೂಪರ್ಸ್ ನ ವಿಶ್ಲೇಷಣೆ ಹೇಳಿದೆ.