ದೇಶ

ಅತ್ಯಾಚಾರ, ಕೊಲೆ, ವಂಚನೆ; ಭಾರತ ಪ್ರವಾಸ ದುಃಸ್ವಪ್ನವಾದೀತು ಎಚ್ಚರ: ಸ್ವಿಸ್ ಸರ್ಕಾರ

Vishwanath S
ನವದೆಹಲಿ: ಉತ್ತರಪ್ರದೇಶದ ಆಗ್ರಾದ ಫತೇಪುರ್ ಸಿಕ್ರಿಯಲ್ಲಿ ಸ್ವಿಸ್ ಜೋಡಿಯ ಮೇಲಿನ ಹಲ್ಲೆ ಪ್ರಕರಣ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರಕ್ಕೀಡಾಗಿದ್ದು ಇದೀಗ ಸ್ವಿಸ್ ಸರ್ಕಾರ ತನ್ನ ಪ್ರಜೆಗಳಿಗೆ ಭಾರತ ಪ್ರವಾಸ ದುಃಸ್ವಪ್ನವಾದೀತು ಎಂದು ಎಚ್ಚರಿಸಿದೆ. 
ಘಟನೆ ಕುರಿತಂತೆ ಭಾರತದ ಪ್ರವಾಸೋದ್ಯಮ ಮತ್ತು ವಿದೇಶ ಸಚಿವರು ಅತ್ಯಂತ ತುರ್ತಾಗಿ ಸ್ಪಂದಿಸಿದ್ದರು. ಆದರೆ ಭಾರತ ಪ್ರವಾಸ ಕೈಗೊಳ್ಳುವ ಸ್ವಿಸ್ ಪ್ರವಾಸಿಗರಿಗೆ ಸ್ವಿಸ್ ಸರ್ಕಾರ ಸುದೀರ್ಘ ಎಚ್ಚರಿಕೆಗಳನ್ನು ಕೊಟ್ಟಿದೆ. ಫತೇಪುರ ಸಿಕ್ರಿಯಲ್ಲಿ ಸ್ವಿಸ್ ಜೋಡಿಯ ಮೇಲೆ ಕಾಮಾಂಥ ಯುವಕರ ಗುಂಪಿನಿಂದ ನಡೆದ ಹಲ್ಲೆಯನ್ನು ಸ್ವಿಟ್ಜರ್‌ಲ್ಯಾಂಡ್‌ ಮತ್ತು ಯುರೋಪ್ ನ ಇತರ ದೇಶಗಳ ಮಾಧ್ಯಮಗಳು ಭಾರೀ ದೊಡ್ಡದಾಗಿ ಹೈಲೈಟ್ ಮಾಡಿದ್ದು ಭಾರತದಲ್ಲಿ ಸಂಚರಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ವಿವಹಿಸಿದೆ. 
ಭಾರತದಲ್ಲಿ ಅಪರಾಧ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮಹಿಳೆಯರ ಮೇಲೆ ಹಲ್ಲೆ, ರೇಪ್ ನಡೆಯುವುದು ಸಾಮಾನ್ಯವಾಗಿದೆ. ಭಾರತದಾದ್ಯಂತ ಲೈಂಗಿಕ ಅಪರಾಧಗಳು ನಡೆಯುತ್ತಿರುವುದು ವರದಿಗಳು ಬರುತ್ತಲೇ ಇವೆ ಎಂದು ಆಗಸ್ಟ್ 25ರಂದೇ ಸ್ವಿಸ್ ಸರ್ಕಾರ ತನ್ನ ದೇಶದವರಿಗೆ ಎಚ್ಚರಿಕೆ ನೀಡಿತ್ತು. 
ಭಾರತ ಪ್ರವಾಸ ಕೈಗೊಳ್ಳುವ ಮಹಿಳೆಯರು ಎಚ್ಚರಿಕೆಯಿಂದಿರಬೇಕು. ಮಹಿಳೆಯರು ಮಾತ್ರವೇ ಗುಂಪಿನಲ್ಲಿ ಪ್ರಯಾಣಿಸುವಾಗ ಕೂಡ ಎಚ್ಚರಿಕೆಯಿಂದಿರಬೇಕು. ಪುರುಷರೊಂದಿಗೆ ಇರುವಾಗ ಅಪಾಯಗಳು ಕಡಿಮೆ ಇರಬಹುದಾದರೂ ಎಚ್ಚರಿಕೆಯಿಂದಿರುವುದು ತುಂಬಾ ಅಗತ್ಯ ಎಂದು ಸ್ವಿಸ್ ಸರ್ಕಾರ ಹೇಳಿದೆ. 
ಭಾರತ ಪ್ರವಾಸಕ್ಕೆ ಬಂದಿದ್ದ ಸ್ವಿಡ್ಜರ್'ಲ್ಯಾಂಡ್ ದಂಪತಿ ಮೇಲಿನ ಕಾಮಾಂಧರು ದಾಳಿ ಈ ಸಂಬಂಧ ಉತ್ತರಪ್ರದೇಶ ಪೊಲೀಸರು ಮೂವರು ಅಪ್ರಾಪ್ತರು ಸೇರಿದಂತೆ ಒಟ್ಟು ಐವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. 
SCROLL FOR NEXT