ರಾಥ್ಲಾಂ: ಮಧ್ಯ ಪ್ರದೇಶ ಬಿಜೆಪಿ ಶಾಸಕಿ ಸಂಗೀತಾ ಚಾರೆಲ್ ಪತಿ ವಿಜಯ್ ಚಾರೇಲ್ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದು, ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ರಾಥ್ಲಾಂ ಜಿಲ್ಲೆಯ ಟೋಲ್ ಪ್ಲಾಜಾವೊಂದರ ಸಿಬ್ಬಂದಿಯನ್ನು ಹಿಗ್ಗಾಮುಗ್ಗಾ ಥಳಿಸಿರುವ ಸಂಪೂರ್ಣ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಜಯ್ ಚಾರೆಲ್ ತನ್ನ ಬೆಂಬಲಿಗರ ಜೊತೆ ಬಲವಂತವಾಗಿ ಟೋಲ್ ಪ್ಲಾಜಾಗೆ ನುಗ್ಗಿ ಅಲ್ಲಿನ ಸಿಬ್ಬಂದಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಜೊತೆಗೆ ಬೇರೊಬ್ಬ ವ್ಯಕ್ತಿ ಬರುವವರೆಗೂ ಸಿಬ್ಬಂದಿ ಮೇಲೆ ಹಲ್ಲೆ ನಿಲ್ಲಿಸಿಲ್ಲ. ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ.