ಸಂಗ್ರಹ ಚಿತ್ರ 
ದೇಶ

ಭಾರತ ಹಿಂದೂ ರಾಷ್ಟ್ರ, ಆದರೆ ಅನ್ಯರು ಇಲ್ಲಿ ಇರಬಾರದು ಎಂದೇನೂ ಇಲ್ಲ: ಮೋಹನ್ ಭಾಗ್ವತ್

ಹಿಂದೂಸ್ತಾನ ಹಿಂದೂಗಳ ರಾಷ್ಟ್ರವಾಗಿದ್ದರೂ ಭಾರತದಲ್ಲಿ ಅನ್ಯರು ಇರಬಾರದು ಎಂದೇನೂ ಇಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಶನಿವಾರ ಹೇಳಿದ್ದಾರೆ.

ನವದೆಹಲಿ: ಹಿಂದೂಸ್ತಾನ ಹಿಂದೂಗಳ ರಾಷ್ಟ್ರವಾಗಿದ್ದರೂ ಭಾರತದಲ್ಲಿ ಅನ್ಯರು ಇರಬಾರದು ಎಂದೇನೂ ಇಲ್ಲ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಶನಿವಾರ ಹೇಳಿದ್ದಾರೆ.
ಶಾಲೆಯೊಂದರ ಕಾರ್ಯಕ್ರಮದಲ್ ಪಾಲ್ಗೊಂಡು ಮಾತನಾಡಿದ ಮೋಹನ್ ಭಾಗ್ವತ್ ಅವರು, ಜರ್ಮನ್ನರ ನಾಡು, ಜರ್ಮನಿ, ಬ್ರಿಟೀಷರನಾಡು ಬ್ರಿಟನ್, ಫ್ರೆಂಚರ ನಾಡು ಫ್ರಾನ್ಸ್ ಅಂತೆಯೇ ಹಿಂದೂಗಳ ನಾಡು  ಹಿಂದೂಸ್ತಾನವಾಗಿದೆ. ಭಾರತದ ಹಿಂದೂರಾಷ್ಟ್ರವಾದ ಮಾತ್ರಕ್ಕೆ ಅನ್ಯರು ಇಲ್ಲಿ ಇರಬಾರದು ಎಂದೇನೂ ಇಲ್ಲ. ಹಿಂದೂ ಎಂಬ ಪದವು ಭಾರತಮಾತೆಯ ಎಲ್ಲ ಮಕ್ಕಳನ್ನೂ ಒಳಗೊಂಡಿರುತ್ತದೆ. ಅಂತೆಯೇ ಭಾರತೀಯ ಸಂಸ್ಕೃತಿಗೆ  ಅನುಸಾರವಾಗಿ ನಡೆಯುವವರೂ ಕೂಡ ಭಾರತೀಯರೇ ಎಂದು ಅವರು ಹೇಳಿದ್ದಾರೆ.
ಅಂತೆಯೇ ಯಾವುದೇ ಸರ್ಕಾರ ಅಥವಾ ವ್ಯಕ್ತಿಯಿಂದ ಮಾತ್ರ ದೇಶದ ಅಭಿವೃದ್ಧಿ ಅಸಾಧ್ಯ ಎಂದು ಅಭಿಪ್ರಾಯಪಟ್ಟಿರುವ ಭಾಗ್ವತ್ ಅವರು, ಸಮಾಜ ಮತ್ತು ಪ್ರಜೆಗಳು ಕೈ ಜೋಡಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದು  ಹೇಳಿದ್ದಾರೆ. ಸಮಾಜದ ಬದಲಾವಣೆ ವ್ಯಕ್ತಿಗಳಿಂದಲೇ ಆಗಬೇಕು. ಸಮಾಜ ಬದಲಾದರೆ ದೇಶ ಬದಲಾಗುತ್ತದೆ. ಹಿಂದೆ ಅಭಿವೃದ್ಧಿಗಾಗಿ ಜನರು ದೇವರ ಮೊರೆ ಹೋಗುತ್ತಿದ್ದರು. ಆದರೆ ಈ ಕಲಿಯುಗದಲ್ಲಿ ಅಭಿವೃದ್ಧಿಗಾಗಿ ಜನ  ಸರ್ಕಾರದ ಮೊರೆ ಹೋಗುತ್ತಿದ್ದಾರೆ. ಆದರೆ ಸತ್ಯಾಂಶವೆಂದರೆ ಸರ್ಕಾರ ಕೂಡ ಅಭಿವೃದ್ಧಿಗಾಗಿ ಜನರೊಂದಿಗೇ ನಡೆಯಬೇಕಿದೆ. ಸಮಾಜವೇ ಸರ್ಕಾರದ ಪಿತಾಮಹ ಎಂದು ಭಾಗ್ವತ್ ಬಣ್ಣಿಸಿದ್ದಾರೆ. ಸಮಾಜವನ್ನು ಪ್ರತ್ಯೇಕಿಸಿ  ಬದಲಾವಣೆ ಅಥವಾ ಅಭಿವೃದ್ಧಿ ಎಂಬುದು ಸರ್ಕಾರದಿಂದಲೂ ಅಸಾಧ್ಯ ಎಂದು ಭಾಗ್ವತ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!