ಸಂಗ್ರಹ ಚಿತ್ರ 
ದೇಶ

37ನೇ ಅವೃತ್ತಿಯ ಮನ್ ಕೀ ಬಾತ್: ಕ್ರೀಡಾಪಟುಗಳ ಸಾಧನೆ ಶ್ಲಾಘಿಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನ 37ನೇ ಆವೃತ್ತಿ ಪ್ರಸಾರವಾಗಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕ್ರೀಡೆ, ಭಾರತೀಯ ಸಂಪ್ರದಾಯಗಳ ಕುರಿತು ಮಾತನಾಡಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಉದ್ದೇಶಿತ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನ 37ನೇ ಆವೃತ್ತಿ ಪ್ರಸಾರವಾಗಿದ್ದು, ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕ್ರೀಡೆ, ಭಾರತೀಯ ಸಂಪ್ರದಾಯಗಳ ಕುರಿತು  ಮಾತನಾಡಿದ್ದಾರೆ.
ಪ್ರಮುಖವಾಗಿ ದೇಶದ ಕ್ರೀಡಾಪಟುಗಳ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, ಕ್ರೀಡಾಪಟುಗಳ ಸಾಧನೆ ಶ್ಲಾಘನೀಯ.. ವಿಶ್ವಮಟ್ಟದಲ್ಲಿ ದೇಶದ ಹೆಸರು ರಾರಾಜಿಸುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಅಂತೆಯೇ  ಅಂಡನ್ 17 ಫಿಫಾ ವಿಶ್ವಕಪ್ ಅನ್ನು ಯಶಸ್ವಿಯಾಗಿ ಆಯೋಜಿಸಿದ ಕುರಿತೂ ಪ್ರಧಾನಿ ಮೋದಿ ಸಂತಕ ವ್ಯಕ್ತಪಡಿಸಿದ್ದಾರೆ. ಅಂತೇಯೇ ಏಷ್ಯಾ ಕಪ್ ಗೆದ್ದ ಭಾರತ ಹಾಕಿ ತಂಡವನ್ನು ಕೊಂಡಾಡಿದ ಪ್ರಧಾನಿ ಮೋದಿ, ಏಷ್ಯಾ ಕಪ್ ನಲ್ಲಿ  ಪ್ರಧಾನಿ ಮೋದಿ ಭಾರತ ತಂಡದ ಪ್ರದರ್ಶನ ಅತ್ಯುತ್ತಮವಾಗಿತ್ತು ಎಂದು ಹೇಳಿದರು.
ಸಿಸ್ಟರ್ ನಿವೇದಿತಾ ಅವರ 150ನೇ ಜನ್ಮದಿನವನ್ನು ನೆನಪಿಸಿಕೊಂಡ ಪ್ರಧಾನಿಮೋದಿ ಕೆಲ ಮಹೋನ್ನತ ವ್ಯಕ್ತಿತ್ವಗಳು ಮಾನವೀಯತೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಅಂತಹವರಲ್ಲಿ ಸಿಸ್ಟರ್ ನಿವೇದಿತಾ ಕೂಡ  ಒಬ್ಬರು. ಅವರು ಬಯಸಿದ್ದರೆ ಐಶಾರಾಮಿ ಜೀವನ ನಡೆಸಬಹುದಿತ್ತು. ಆದರೆ ಮಾನವೀಯತೆಗಾಗಿ ತಮ್ಮ ಜೀವನನ್ನು ಸವೆಸಿದರು.1899ರಲ್ಲಿ ಮಹಾಮಾರಿ ಪ್ಲೇಗ್ ಹಬ್ಬಿದ್ದಾಗ ಸಿಸ್ಟರ್ ನಿವೇದಿತಾ ತಾವೇ ಸೊಂಟಕಟ್ಟಿಕೊಂಡು  ಒಳಚರಂಡಿಗಳನ್ನು ಸ್ವಚ್ಛಗೊಳಿಸಿದ್ದರು. ಬಡವರಿಗಾಗಿ ಅವರ ಸೇವೆ ಅಪಾರ ಎಂದು ಹೇಳಿದರು. ಅಂತೆಯೇ ದೇಶ ಕಾಯುವ ಯೋಧರ ಕುರಿತು ಮಾತನಾಡಿದ ಪ್ರಧಾನಿ ಮೋದಿ, ಸೇನೆಯಲ್ಲಿ ಮಹಿಳೆಯ ಪಾತ್ರ ಪ್ರಶಂಸಾರ್ಹ..  ಶಾಂತಿ ಪಾಲನಾ ಪಡೆಗೆ ಮಹಿಳಾ ಯೋಧರನ್ನು ಕಳುಹಿಸಿದ ಮೊಟ್ಟ ಮೊದಲ ದೇಶ ಭಾರತ.. ಇದು ನಮಗೆ ಹೆಮ್ಮೆ. 
ಮೇಕಿಂಗ್ ಆಫ್ ಇಂಡಿಯಾದಲ್ಲಿ ದೇಶದ ಪ್ರತೀಯೊಂದು ಮಗವೂ ಕೂಡ ಹೀರೋಗಳೇ..ಸಮಾಜ ಮತ್ತು ಕುಟುಂಬ ನಮ್ಮ ಮಕ್ಕಳ ಉನ್ನತೀಕರಣಕ್ಕೆ ಮತ್ತು ಅವರ ಸಮಸ್ಯೆ ಈಡೇರಿಕೆಯತ್ತ ಗಮನ ಹರಿಸಬೇಕಿದೆ ಎಂದು  ಹೇಳಿದರು. ಅಂತೆಯೇ ಖಾದಿ ಗ್ರಾಮೋದ್ಯಗದ ಅಭಿವೃದ್ಧಿ, ಯೋಗ, ಆಯುರ್ವೇದ ಮತ್ತು ಯೋಗ ವೈದ್ಯಕೀಯ ವ್ಯವಸ್ಥೆ, ಸ್ವಚ್ಛ ಭಾರತ ಅಭಿಯಾನದ ಕುರಿತು ಮಾತನಾಡಿದ ಪ್ರಧಾನಿ ಮೋದಿ ಚಾತ್ ಪೂಜಾ (ಸೂರ್ಯ  ಪೂಜೆ)ಯನ್ನು ಪ್ರಕೃತಿ ಮತ್ತು ಮನುಷ್ಯನ ನಡುವಿನ ಅವಿನಾಭಾವ ಸಂಬಂಧ ಎಂದು ಬಣ್ಣಿಸಿದರು.
ಇನ್ನು 31 ಅಕ್ಟೋಬರ್ ರಂದು ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆಯನ್ನು ಪ್ರಧಾನಿ ಮೋದಿ ನೆನೆದರು.
ಇದೇ ನವೆಂಬರ್ 4ರಂದು ಗುರುನಾನಕ್ ಜಯಂತಿ ಇರುವ ಕಾರಣ, ಗುರುನಾನಕ್ ರ  ನೆನೆದ ಪ್ರಧಾನಿ ಮೋದಿ, ಮಾನವೀಯತೆ ಮೌಲ್ಯವನ್ನು ಜನರಿಗೆ ತಿಳಿಸಲಿಕ್ಕಾಗಿ ಗುರುನಾನಕ್ ದೇವ್ ಜೀ ಅವರು 28 ಸಾವಿರ ಕಿ.ಮೀ  ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಿದ್ದರು. ಹಸಿದವರಿಗಾಗಿ ಉಚಿತ ದಾಸೋಹಕ್ಕಾಗಿ ಲಂಗರ್ ಗಳನ್ನು ತೆರೆದಿದ್ದರು. ಇದು ಸೇವಾ ಮನೋಭಾವವನ್ನು ಪಸರಿಸುತ್ತಿದೆ ಎಂದು ಹೇಳಿದರು. ಅಕ್ಟೋಬರ್ 31ರಂದು ಸರ್ದಾರ್  ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ನೆನದ ಮೋದಿ, ಆಧುನಿಕ, ಏಕೀಕೃತ ಭಾರತಕ್ಕೆ ಅಡಿಗಲ್ಲು ಹಾಕಿದ್ದೇ ಸರ್ದಾರ್ ವಲ್ಲಭಬಾಯಿ ಪಟೇಲ್ ಎಂದು ಬಣ್ಣಿಸಿದರು. ಅಂತೆಯೇ ಅಕ್ಟೋಬರ್ 31ರಂದು  ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನಾಚರಣೆ ನಿಮಿತ್ತ ರನ್ ಫಾರ್ ಯೂನಿಟಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ದೇಶದ ಎಲ್ಲ ಜನರೂ ಪಾಲ್ಗೊಳ್ಳುವಂತೆ ಪ್ರಧಾನಿ ಮೋದಿ ಮನವಿ ಮಾಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!