ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಟ್ವಿಟ್ಟರ್ ನಲ್ಲಿ ಇತ್ತೀಚೆಗೆ ಹೆಚ್ಚು ಸಕ್ರಿಯರಾಗಿ ಜನಪ್ರಿಯತೆ ಹೆಚ್ಚಾಗಿರುವುದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದರು. ಇಂತಹ ಟ್ವೀಟ್ ಗಳನ್ನು ರಾಹುಲ್ ಗಾಂಧಿಯವರೇ ಮಾಡುತ್ತಾರೊ, ಅಥವಾ ಅವರ ಹಿಂದೆ ಬೇರೆ ಯಾರಾದರು ಇದ್ದಾರೆಯೇ ಎಂದು ಪ್ರಶ್ನಿಸಿದ್ದರು. ಅದನ್ನೀಗ ಸ್ವತಃ ರಾಹುಲ್ ಗಾಂಧಿಯವರೇ ಬಹಿರಂಗಪಡಿಸಿದ್ದಾರೆ. ಅದು ಬೇರೆ ಯಾರೂ ಅಲ್ಲ, ಅವರ ಪ್ರೀತಿಯ ನಾಯಿ ಪಿಡಿ.
ತಮ್ಮ ನಾಯಿ ಪಿಡಿ ಉಪಾಯವೊಂದನ್ನು ಮಾಡುತ್ತಿರುವುದರ ವಿಡಿಯೊವನ್ನು ಟ್ವೀಟ್ ಮಾಡಿ ರಾಹುಲ್ ಅವರು, ಪಿಡಿ ಇದೀಗ ಸ್ವಚ್ಛವಾಗಿ ಬಂದಿದ್ದೇನೆ. ಇದು ನಾನು ಪಿಡಿ, ನಾನು ಅವನಿಗಿಂತಲೂ ತುಂಬಾ ಮುಂದಿದ್ದೇನೆ, ಎಂದು ಬರೆದಿದ್ದಾರೆ. ಇದಕ್ಕೆ ಮತ್ತಷ್ಟು ಹಾಸ್ಯ ಸೇರಿಸಿ ಟ್ವೀಟ್ ವೊಂದರಿಂದ ನಾನು ಏನು ಮಾಡಲು ಸಾಧ್ಯ, ಟ್ರೀಟ್ ಅಷ್ಟೆ ಎಂದಿದ್ದಾರೆ.
ಇದೀಗ ರಾಹುಲ್ ಗಾಂಧಿಯವರ ಈ ಟ್ವೀಟ್ ವೈರಲ್ ಆಗಿದೆ. ಹಲವರು ಪಿಡಿಗೆ ಅದ್ಭುತ ಕೌಶಲ್ಯವಿದೆ ಎಂದು ಹೊಗಳಿ ಬರೆದಿದ್ದರೆ ಹಲವರು ಕ್ರಿಯಾತ್ಮಕವಾಗಿ ಮೀಮ್ ಮಾಡಿದ್ದಾರೆ.
2019ರ ಚುನಾವಣೆಯಲ್ಲಿ ಪಿಡಿ ಮತ್ತು ಪಿಎಂ ಮಧ್ಯೆ ಸ್ಫರ್ಧೆ ನಡೆಯಲಿದ್ದು ಅದನ್ನು ಎದುರು ನೋಡುತ್ತಿದ್ದೇನೆ ಎಂದು ಬರೆದಿದ್ದಾರೆ.
ಕಳೆದ ಕೆಲ ತಿಂಗಳಿನಿಂದ ಟ್ವಿಟ್ಟರ್ ನಲ್ಲಿ ಕ್ರಿಯಾಶೀಲರಾಗಿರುವ ರಾಹುಲ್ ಗಾಂಧಿ ಹಲವು ಬುದ್ಧಿವಂತ ಟ್ವೀಟ್ ಗಳ ಮೂಲಕ ಬಿಜೆಪಿ ಸರ್ಕಾರದ ಮೇಲೆ ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ ಟ್ವಿಟ್ಟರ್ ನಲ್ಲಿ ಮೋದಿಯವರ ಜಿಎಸ್ ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಕರೆದು ಭಾರತದ ಆರ್ಥಿಕತೆಯನ್ನು ಹಿಂದಿ ರೈಮ್ ಮೂಲಕ ಅರುಣ್ ಜೇಟ್ಲಿಯವರನ್ನು ಬರೆದು ಸ್ಟಾರ್ ವಾರ್ ಸಿನಿಮಾದ ಪನ್ ಹಾಕಿದ್ದರು.
ಇದಕ್ಕೆ ಬಿಜೆಪಿ ಕೂಡ ರಾಹುಲ್ ಗಾಂಧಿಯವರ ಕಾಲೆಳೆದಿದೆ. ಬಿಜೆಪಿಯ ಮಾಹಿತಿ ತಂತ್ರಜ್ಞಾನ ಕೋಶದ ಮುಖ್ಯಸ್ಥ ಅಮಿತ್ ಮಾಳವೀಯ ಅಕ್ಷಯ್ ಕುಮಾರ್ ಅವರ ಮುಂದಿನ ಚಿತ್ರ ಪದ್ಮನ್ ನ ಪೋಸ್ಟರ್ ನ್ನು ಸ್ವಲ್ಪ ಮಾರ್ಪಾಡು ಮಾಡಿ ಹಾಕಿದ್ದಾರೆ. ಚಿತ್ರದ ಪೋಸ್ಟರ್ ಕೂಡ ನಿನ್ನೆ ಬಿಡುಗಡೆಯಾಗಿತ್ತು. ಪೋಸ್ಟರ್ ನಲ್ಲಿ ರಾಹುಲ್ ಗಾಂಧಿ ಸೈಕಲ್ ಮೇಲೆ ಕುಳಿತಿದ್ದು ಸೈಕಲ್ ನ ಮುಂದಿನ ರಾಡ್ ನಲ್ಲಿ ಅವರ ನಾಯಿ ಕುಳಿತಿದೆ.
ಅಸ್ಸಾಂ ಸಚಿವ ಹಿಮಂತ ಬಿಸ್ವಾ ಸರ್ಮಾ ಕೂಡ ಈ ಕುರಿತು ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿಯವರು ಟ್ವಿಟ್ಟರ್ ನಲ್ಲಿ ಪ್ರಸ್ತುತ 4 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.