ದೇಶ

ಮಹಾತ್ಮ ಹತ್ಯೆ ಪ್ರಕರಣ: ಮರುಪರಿಶೀಲನಾ ಅರ್ಜಿಗೆ ತಡೆ ಕೋರಿ ಗಾಂಧಿ ಮರಿ ಮೊಮ್ಮಗನಿಂದ ಸುಪ್ರೀಂ ಗೆ ಮನವಿ

Raghavendra Adiga
ನವದೆಹಲಿ: ಮಹಾತ್ಮಾ ಗಾಂಧಿಯವರ ಮೊಮ್ಮಗ ತುಷಾರ್ ಗಾಂಧಿ, ಮಹಾತ್ಮಾದ 70 ವರ್ಷದ ಹಿಂದಿನ ಹತ್ಯೆ ಪ್ರಕರಣವನ್ನು ಮರುಪರಿಶೀಲನೆಗೆ ತೆಗೆದುಕೊಳ್ಳುವುದನ್ನು ವಿರೋಧಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ನ್ಯಾಯಮೂರ್ತಿಗಳಾದ ಎಸ್. ಎ.ಬೋಬ್ಡೆ ಮತ್ತು ಎಮ್ ಎಂ ಶಾಂತನಗೌಡರ್ ಅವರ ಪೀಠವು ತುಷಾರ್ ಗಾಂಧಿಯವರ ಮನವಿಯನ್ನು ವಿಚಾರಣೆ ನಡೆಸಲಿದೆ. ಹಿರಿಯ ವಕೀಲೆ ಇಂದಿರಾ ಜೈಸಿಂಗ್, ನ್ಯಾಯಾಲಯವು ನೋಟಿಸ್ ಜಾರಿಗೊಳಿಸುವ ಮುಖೇನ ಪ್ರಕರಣ ಮುಂದುವರಿಇಸ್ದರೆ ತಾವು ಗಾಂಧಿ ಪರ ವಕಾಲತ್ತು ವಹಿಸುವುದಾಗಿ ಹೇಳಿದರು.]
ಈ ಪ್ರಕರಣದ ಸಂಬಂಧ ಹಲವು ಬಾರಿ ವಿಚಾರಣೆಗಳು ನಡೆದಿವೆ ಎಂದ ನ್ಯಾಯ ಪೀಠ ಅಮೆಕಸ್ ಕ್ಯೂರಿ (ನ್ಯಾಯಾಲಯದ ಸ್ನೇಹಿತ) ಅಮರೇಂದರ್ ಶರಣ್ ಅವರ ವರದಿಗಾಗಿ ಕಾಯಬೇಕಿದೆ ಎಂದು ಅಭಿಪ್ರಾಯಪಟ್ಟಿತು.
ಪ್ರಕರಣಕ್ಕೆ ಸಂಬಂಧಿಸಿ ವರದಿ ಸಲ್ಲಿಸಲು ಶರಣ್ ನಾಲ್ಕು ವಾರಗಳ ಕಾಲ ಕೇಳಿದ್ದಾರೆ, ರಾಷ್ಟ್ರೀಯ ಆರ್ಚಿವ್ಸ್ ನಿಂದ ಸೂಕ್ತ ದಾಖಲೆಗಳನ್ನು ಅವರು ಇನ್ನೂ ಪಡೆಯಲಿಲ್ಲ ಎಂದು ತಿಳಿಸಿದರು. 70 ವರ್ಷ ಹಿಂದಿನ ಮಹಾತ್ಮರ ಹತ್ಯೆಯ ಪ್ರಕರಣವನ್ನು ಮರುಪರಿಶೀಲಿಸುವುದನ್ನು ತಾನು ವಿರೋಧಿಯಾಗಿದ್ದೇವೆ ಎಂದು ಜೈಸಿಂಗ್ ಹೇಳಿದ್ದಾರೆ  
ಮುಂಬೈ ಮೂಲದ ಪಂಕಜ್ ಫಡ್ನೀಸ್, ಅಭಿನವ್ ಭಾರತ್ ನ ಸಂಶೋಧಕ ಮತ್ತು ಟ್ರಸ್ಟಿ ಮಹಾತ್ಮರ ಹತ್ಯೆಯ ಮರುಪರಿಶೀಲನೆಗಾಗಿ ಕೋರಿದ್ದರು.  ಈ ಸಂಬಂಧ ಸುಪ್ರೀಂ ಕೋರ್ಟ್ ಅ.6 ರಂದು ಹಿರಿಯ ವಕೀಲ ಶರಣ್ ಅವರನ್ನು ಈ ವಿಷಯದಲ್ಲಿ ಸಹಾಯ ಮಾಡಲು ಅಮಿಕಸ್ ಕ್ಯೂರಿ ಯೆಂದು ನೇಮಕ ಮಾಡಿತ್ತು.
SCROLL FOR NEXT