ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದುರಂತದ ಬಳಿಕ ಎಚ್ಚೆತ್ತ ಸರ್ಕಾರ: ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣದಲ್ಲಿ ಮೂರು ಹೆಚ್ಚುವರಿ ಪಾದಾಚಾರಿ ಮೇಲ್ಸೇತುವೆ

23 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತದ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತಿದ್ದು, ಮುಂಬೈನ ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣದಲ್ಲಿ ಮೂರು ಹೆಚ್ಚುವರಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಮಾಡಲು ಮುಂದಾಗಿದೆ.

ಸಂಗ್ರಹ ಚಿತ್ರ
Srinivasa Murthy VN
Updated On : 31 Oct 2017, 1:00 am
ಮುಂಬೈ: 23 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತದ ಬಳಿಕ ಕೇಂದ್ರ ಸರ್ಕಾರ ಎಚ್ಚೆತ್ತಿದ್ದು, ಮುಂಬೈನ ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣದಲ್ಲಿ ಮೂರು ಹೆಚ್ಚುವರಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ  ಮಾಡಲು ಮುಂದಾಗಿದೆ.
ದುರಂತ ನಡೆದಿದ್ದ ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣಕ್ಕೆ ಇಂದು ಕೇಂದ್ರ ರೈಲ್ವೇ ಸಚಿವರಾದ ಪಿಯೂಶ್ ಗೋಯಲ್, ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಭೇಟಿ ನೀಡಿದ್ದರು. ಕೇಂದ್ರ ಸಚಿವರಿಗೆ ಮಹಾರಾಷ್ಟ್ರ  ಸಿಎಂ ದೇವೇಂದ್ರ ಫಡ್ನವಿಸ್ ಅವರು ಸಾಥ್ ನೀಡಿದ್ದರು. ಈ ವೇಳೆ ಮಾತನಾಡಿದ ಪಿಯೋಶ್ ಗೋಯಲ್ ಅವರು, ಭಾರತೀಯ ಸೇನೆಯ ನೆರವಿನೊಂದಿಗೆ ಎಲ್ಫಿನ್ ಸ್ಟೋನ್ ರಸ್ತೆ ರೈಲು ನಿಲ್ದಾಣದಲ್ಲಿ ಮೂರು ಹೆಚ್ಚುವರಿ  ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ.
ಬಳಿಕ ಮಾತನಾಡಿದ ಸಿಎಂ ದೇವೇಂದ್ರ ಫಡ್ನವಿಸ್ ಅವರು, ಈ ಕಾಮಗಾರಿ ಜನವರಿ ವೇಳೆ ಪೂರ್ಣಗೊಳ್ಳುವ ವಿಶ್ವಾಸವಿದ್ದು, ಎಲ್ಫಿನ್ ಸ್ಟೋನ್ ರಸ್ತೆ ಮಾತ್ರವಲ್ಲದೇ ಹೆಚ್ಚು ಜನಸಂದಣಿ ಇರುವ ಮುಂಬೈನ ಇತರೆ ಮೂರು ರೈಲು  ನಿಲ್ದಾಣಗಳಲ್ಲೂ ಹೆಚ್ಚುವರಿ ಪಾದಾಚಾರಿ ಮೇಲ್ಸೇತುವೆ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. 

Advertisement

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು, ಇದೇ ಮೊದಲ ಬಾರಿಗೆ ಸಿವಿಲ್ ಕಾರ್ಯಕ್ಕೆ ಸೇನೆಯನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ ಈ ಹಿಂದೆ ನಡೆದ ದುರಂತ ನಿಜಕ್ಕೂ  ದೊಡ್ಡ ದುರಂತವಾಗಿತ್ತು. ಭವಿಷ್ಯದಲ್ಲಿ ಇಂತಹ ದುರಂತಗಳು ಮರುಕಳಿಸಬಾರದು. ಹೀಗಾಗಿ ತುರ್ತಾಗಿ ರೈಲು ನಿಲ್ದಾಣದಲ್ಲಿ ಪಾದಾಚಾರಿ ಮಾರ್ಗದ ನಿರ್ಮಾಣವಾಗಬೇಕಿದೆ. ಇದೇ ಕಾರಣಕ್ಕೆ ಸೈನಿಕರು ನಿಲ್ದಾಣದಲ್ಲಿ ಕಾಮಗಾರಿ  ಆರಂಭಿಸಲಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement