ಕಣ್ಣೂರ್(ಕೇರಳ): ರು. 3.25 ಕೋಟಿ ಹವಾಲ ಹಣ ಹೊಂದಿದ್ದ ಇಬ್ಬರು ಯುವಕರನ್ನು ಕಣ್ಣೂರಿನ ತಲಸ್ಸೆರಿ ಬಳಿ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಸಿಟಿ-ಕಣ್ಣೂರು-ಯಶವಂತಪುರ ಎಕ್ಸ್ ಪ್ರೆಸ್ ರೈಲಿನಲ್ಲಿ 3.25 ಕೋಟಿ ರುಪಾಯಿ ಹವಾಲ ಹಣದೊಂದಿಗೆ ತೆರಳುತ್ತಿ ಇಕ್ಬಾಲ್ ಮತ್ತು ಮೊಹಮ್ಮದ್ ಶಕೀಲ್ ಎಂಬುವರನ್ನು ತಲಸ್ಸೆರಿ ರೇಲ್ವೆ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.
ತಲಸ್ಸೆರಿ ಪೊಲೀಸ್ ಉಪ ಅಧೀಕ್ಷಕ ಅಬ್ರಹಾಂ ಮ್ತತು ರೈಲ್ವೆ ರಕ್ಷಣಾ ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ಅವರಿಂದ 2000, 500 ಮತ್ತು 100 ರುಪಾಯಿ ಮುಖಬೆಲೆಯ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ವಶಪಡಿಸಿಕೊಂಡಿರುವ ಹಣವನ್ನು ಡಿವೈಎಸ್ಪಿ ಅಬ್ರಹಾಂ ಜಾರಿ ನಿರ್ದೇಶನಾಯಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನಲ್ಲಿ ಚಿನ್ನದ ಆಭರಣಗಳ ಮಾರಾಟದ ಮೂಲಕ ಹಣವನ್ನು ಗಳಿಸಿರುವುದಾಗಿ ಪೊಲೀಸರಿಗೆ ಆರೋಪಿಗಳು ಹೇಳಿದ್ದಾರೆ.