ಹೊಸದಿಲ್ಲಿ: ಕಡ್ದಾಯ ಮತದಾನ ಜಾರಿಯ ಕುರಿತು ತಾನು ಯಾವ ತೀರ್ಮಾನ ನೀಡಲು ಬರುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಚುನಾವಣೆಗಳಲ್ಲಿ ಮತದಾನ ಕಡ್ಡಾಯಗೊಳಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್) ಕುರಿತು ವಕೋರ್ಟ್ ಈ ಮೇಲಿನ ಹೇಳಿಕೆ ನೀಡಿದೆ,
ಮತದಾನದ ವಿಚಾರವು ಶಾಸಕಾಂಗದ ಅಡಿಯಲ್ಲಿ ಬರುವುದರಿಂದ, ತಾನು ವಿಚಾರಣೆ ನಡೆಸಲು ಸಾಧ್ಯವೆ?ಎಂದು ಕೋರ್ಟ್ ಅನುಮಾನ ವ್ಯಕ್ತಪಡಿಸಿದೆ.
"ನೀತಿಗಳನ್ನು ನಿರ್ಧರಿಸುವುದು ಶಾಸಕಾಂಗದ ಹೊಣೆಯಾಗಿದ್ದು, ನಾವು ಈ ಸಂಬಂಧ್ ಸರಕಾರದ ಮೇಲೆ ಒತ್ತಡ ಹೇರಲು ಸಾಧ್ಯವಿಲ್ಲ" ಎಂದು ನ್ಯಾಯಮೂರ್ತಿ ಚೆಲಮೇಶ್ವರ್ ಹಾಗೂ ನ್ಯಾಯಮೂರ್ತಿ ಅಮಿತಾವ್ ರಾಯ್‌ರನ್ನೊಳಗೊಂಡ ಪೀಠ ತಿಳಿಸಿದೆ.
ಆದರೆ, ಶಾಸಕಾಂಗಕ್ಕೆ ಕಾನೂನು ರಚಿಸಲು ಇಷ್ಟವಿಲ್ಲವೆಂದಾದಲ್ಲಿ ನ್ಯಾಯಾಲಯವು ಈ ಬಗ್ಗೆ ವಿಚಾರಣೆ ನಡೆಸಬಹುದೇ ಪರಿಶೀಲಿಸುವುದಾಗಿ ಪೀಠ ತಿಳಿಸಿತು.
ಆಸ್ಪ್ರೇಲಿಯಾ ಮತ್ತಿತರೆ ಹಲವು ದೇಶಗಳಲ್ಲಿ ಕಡ್ಡಾಯ ಮತದಾನ ಕಾನೂನು ಜಾರಿಯಲ್ಲಿದೆ, ಅಲ್ಲಿ ಅದು ಯಶಸ್ವಿಯಾಗಿದೆ ಎಂದು ಪಿಐಎಲ್ ನಲ್ಲಿ ತಿಳಿಸಲಾಗಿದೆ.ಈ ಕುರಿತ ಅರ್ಜಿಯನ್ನು ದಸರಾ ರಜೆಯ ಬಳಿಕ ವಿವರವಾಗಿ ಆಲಿಸುವುದಾಗಿ ಪೀಠ ಹೇಳಿತು.
ಮತದಾನವು ಜನರ ಮೂಲಭೂತ ಹಕ್ಕು, ಆದರೆ ಕರ್ತವ್ಯವಲ್ಲ. ಜತೆಗೆ ಈ ವಿಷಯ ನ್ಯಾಯಾಂಗದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಪಿಐಎಲ್ ವಜಾಗೊಳಿಸುವಂತೆ ಈ ಹಿಂದೆ ಕೇಂದ್ರವು ಕೋರ್ಟ್‌ಗೆ ವಿವರಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics