ದೇಶ

ಅರುಣಾಚಲ ಪ್ರದೇಶ-ಮ್ಯಾನ್ಮಾರ್ ಗಡಿ: ಸೇನಾ ಕಾರ್ಯಾಚರಣೆ, ಎನ್ಎಸ್ ಸಿಎನ್ ಕೇಡರ್ ಹತ್ಯೆ

Sumana Upadhyaya
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಭಾರತ-ಮ್ಯಾನ್ಮಾರ್ ಗಡಿಭಾಗದಲ್ಲಿ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ನ್ಯಾಶನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಉಗ್ರಗಾಮಿ ಸಂಘಟನೆಯ ಕೇಡರ್ ಮೃತಪಟ್ಟಿದ್ದು ಮತ್ತೊಬ್ಬ ಸೈನಿಕ ಗಾಯಗೊಂಡಿದ್ದಾರೆ.
ವರದಿಗಳ ಪ್ರಕಾರ, ಎಕೆ-56 ಹಲ್ಲೆ ರೈಫಲ್, ಹ್ಯಾಂಡ್ ಗ್ರೆನೇಡ್, ಒಂದು ರೇಡಿಯೊ ಸೆಟ್, 200 ಸುತ್ತು ಮದ್ದು ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ದಾಳಿ ಅರುಣಾಚಲ ಪ್ರದೇಶದ ಲಾಂಗ್ ಡಿಂಗ್ ಜಿಲ್ಲೆಯಲ್ಲಿ ನಡೆದಿದೆ.
ಭಾರತೀಯ ಸೇನಾ ಮೂಲಗಳ ಪ್ರಕಾರ, ಕಾರ್ಯಾಚರಣೆ ಇಂದು ಬೆಳಗ್ಗೆ 730ರ ಸುಮಾರಿಗೆ ನಡೆದಿದ್ದು ಇನ್ನು ಕೂಡ ಮುಂದುವರಿದಿದೆ.
ಕಾರ್ಯಾಚರಣೆ ಬಗ್ಗೆ ಹೆಚ್ಚಿನ ಮಾಹಿತಿ ಬಹಿರಂಗಪಡಿಸಿದ ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್, ಇದೊಂದು ಸಹಜ ದೈನಂದಿನ ಕಾರ್ಯಚರಣೆಯಾಗಿತ್ತು. ಇಂತಹ ಕಾರ್ಯಾಚರಣೆ ಪ್ರತಿದಿನ ನಡೆಯುತ್ತವೆ. ಇದರಲ್ಲೇನು ವಿಶೇಷವಿಲ್ಲ ಎನ್ನುತ್ತಾರೆ.
ಇದು ಗಡಿ ಭಾಗದ ಮಿಲಿಟರಿ ದಾಳಿ ಕೂಡ ಅಲ್ಲ ಎಂದು ಸೇನಾಪಡೆ ತಿಳಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
SCROLL FOR NEXT