ಬೆಂಗಳೂರ: ಇನ್ಫೋಸಿಸ್ ಸಹ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಮತ್ತು ಮುಂಬೈ ಮೂಲದ ವಿಜ್ಞಾನಿ ವೀಣಾ ಸಹಜ್ ವಾಲಾ ಅವರು ಪ್ರತಿಷ್ಠಿತ ಪ್ಲಸ್ ಅಲೈಯನ್ಸ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ನವೀನ ಸಂಶೋಧನೆ, ಶೈಕ್ಷಣಿಕ ಸಾಧನೆ, ಜಾಗತಿಕ ನಾಯಕತ್ವಕ್ಕಾಗಿ ಅವರು ಈ ಪುರಸ್ಕಾರಕ್ಕೆ ಬಾಜನರಾಗಿದ್ದಾರೆ. ನಾರಾಯಣಮೂರ್ತಿ ಅವರ ಪರವಾಗಿ ಅವರ ಪುತ್ರಿ ಅಕ್ಷತಾ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಒಟ್ಟು 50,000 ಅಮೆರಿಕ ದಾಲರ್ ಹುಮಾನದ ಮೊತ್ತ ಹೊಂದಿರುವ ಈ ಪ್ರಶಸ್ತಿ ಶೈಕ್ಷಣಿಕ ಸಾಧನೆ ಮತ್ತು ಸಂಶೋಧನೆ ಅನ್ವೇಷಣೆ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೀಡಲಾಗುತ್ತದೆ. ಮೂರ್ತಿ ಅವರಿಗೆ ಪ್ಲಸ್ ಅಲೈಯನ್ಸ್ ಪ್ರೈಜ್ ಅನ್ನು ಜಾಗತಿಕ ನಾಯಕತ್ವಕ್ಕಾಗಿ ಹಾಗೂ ಪ್ರೊ. ಸಹಜ್ ವಾಲಾ ಅವರಿಗೆ ಪ್ಲಸ್ ಅಲೈಯನ್ಸ್ ಪ್ರೈಜ್ ಅನ್ನು ಸಂಶೋಧನೆ ನವೀನತೆಗಾಗಿ ದ ನ್ಯೂ ಸೈನ್ಸ್ ಆಫ್ ಗ್ರೀನ್ ಮ್ಯಾನುಫ್ಯಾಕ್ಚರಿಂಗ್' ಯೋಜನೆಗಾಗಿ ನೀಡಲಾಗಿದೆ.
ಪ್ಲಸ್ ಅಲೈಯನ್ಸ್ ಅರಿಜೋನಾ ಸ್ಟೇಟ್ ಯೂನಿವರ್ಸಿಟಿ, ಕಿಂಗ್ಸ್ ಕಾಲೇಜು ಲಂಡನ್ ಮತ್ತು ಯುಎನ್ ಎಸ್‍ಡಬ್ಲ್ಯೂ ಸಿಡ್ನಿಯಲ್ಲಿ ವಿಶೇಷ ಜಂಟಿ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಸಂಸ್ಥೆ. ಫೆಬ್ರುವರಿ 2016ರಲ್ಲಿ ಪ್ರಾರಂಭವಾದ ಇದು ಸಂಶೋಧನಾ ಆಧಾರಿತ ಜಾಗತಿಕ ಸವಾಲುಗಳಿಗೆ ಸ್ಪಂದಿಸಲು ವಿಶ್ವದರ್ಜೆಯ ಕಲಿಕೆಗೆ ಉತ್ತೇಜನ ನೀಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics