ಕೊಚ್ಚಿ: 102 ಪ್ರಯಾಣಿಕರನ್ನು ಹೊತ್ತಿದ್ದ ಏರ್ ಇಂಡಿಯಾ ವಿಮಾನ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಭಾರಿ ಅವಘಡದಿಂದ ತಪ್ಪಿಸಿಕೊಂಡಿದ್ದು, ವಿಮಾನದ ಚಕ್ರಗಳು ಮೋರಿಗೆ ಸಿಲುಕಿ ಹಾಕಿಕೊಳ್ಳುವ ಮೂಲಕ ಕೆಲಕಾಲ ಪ್ರಯಾಣಿಕರನ್ನು ಆಂತಕಕ್ಕೀಡು ಮಾಡಿತ್ತು.
ಮೂಲಗಳ ಪ್ರಕಾರ ಏರ್ ಇಂಡಿಯಾ ವಿಮಾನ ಸಂಖ್ಯೆ 737-800 ವಿಮಾನ ಇಂದು ಬೆಳಗ್ಗೆ 2.39ಕ್ಕೆ ಅಬುದಾಬಿನಿಂದ ಕೊಚ್ಚಿ ಏರ್‌ಪೋರ್ಟ್‌ಗೆ ಬಂದಿಳಿದಿತ್ತು. 2.40ಕ್ಕೆ ಪೈಲೆಟ್ ವಿಮಾನವನ್ನು ಹಿಂಬದಿಯಿಂದ ಪಾರ್ಕ್ ಮಾಡುತ್ತಿದ್ದರು. ಈ ವೇಳೆ ವಿಮಾನದ ಹಿಂಬದಿಯ ಚಕ್ರಗಳು ರಸ್ತೆ ಬದಿಯಲ್ಲಿರುವ ಕಾಲುವೆಗೆ ಬಿದ್ದು ಸಿಲುಕಿಕೊಂಡಿವೆ. ಈ ವೇಳೆ ವಿಮಾನದಲ್ಲಿದ್ದ ಪ್ರಯಾಣಿಕರು ಆತಂಕಕ್ಕೀಡಾಗಿದ್ದರು. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.
ಪ್ರಯಾಣಿಕರೆಲ್ಲರನ್ನು ಸುರಕ್ಷಿತವಾಗಿ ವಿಮಾನದಿಂದ ಇಳಿಸಿ ಹೊರಗಡೆ ಕಳುಹಿಸಲಾಗಿದೆ. ಮೂಲಗಳ ಪ್ರಕಾರ ವಿಮಾನದಲ್ಲಿ 102 ಪ್ರಯಾಣಿಕರು ಹಾಗೂ ಪೈಲಟ್ ಗಳು ಸೇರಿದಂತೆ 6 ಮಂದಿ ಸಿಬ್ಬಂದಿಗಳು ಇದ್ದರು ಎಂದು ತಿಳಿದುಬಂದಿದೆ. ಇನ್ನು ಈ ಘಟನೆ ಟೇಕ್ ಆಫ್ ವೇಳೆ ನಡೆದಿದ್ದರೇ ವಿಮಾನ ಪತನಗೊಳ್ಳುವ ಸಾಧ್ಯತೆ ಹೆಚ್ಚಾಗಿತ್ತು ಎನ್ನಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಈ ಅವಘಡದಿಂದ ಪ್ರಯಾಣಿಕರೂ ಸೇರಿದಂತೆ ಯಾರಿಗೂ ತೊಂದರೆಯಾಗಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics