ನವದೆಹಲಿ: ಉಗ್ರ ದಾಳಿ ವೇಳೆ ಹುತಾತ್ಮರಾಗಿದ್ದ ಪೊಲೀಸ್ ಅಧಿಕಾರಿ ಅಬ್ದುಲ್ ರಷೀದ್ ಅವರ ಪುತ್ರಿಯ ವಿದ್ಯಾಭ್ಯಾಸಕ್ಕೆ ತಾವು ಜೀವನ ಪರ್ಯಂತ ಆರ್ಥಿಕ ನೆರವು ನೀಡುವಾದಿಗೆ ಖ್ಯಾತ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ನಡೆದಿದ್ದ ಉಗ್ರರ ದಾಳಿ ವೇಳೆ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ಅಬ್ಲುಲ್ ರಷೀದ್ ಅವರು ಉಗ್ರ ಗುಂಡಿನ ದಾಳಿಗೆ ಬಲಿಯಾಗಿದ್ದರು. ಅನಂತ್ ನಾಗ್ ಜಿಲ್ಲೆಯಲ್ಲಿ ಇಂದು ಹುತಾತ್ಮ ಪೊಲೀಸ್ ಅಧಿಕಾರಿಯ ಅಂತ್ಯಸಂಸ್ಕಾರ ನಡೆಯುತ್ತಿದ್ದು, ಸಾವಿರಾರು ಯುವಕರು ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದಾರೆ.
ಇದರ ಬೆನ್ನಲ್ಲೇ ತಮ್ಮ ಟ್ವಿಟರ್ ಖಾತೆಯಲ್ಲಿ ಪೊಲೀಸ್ ಅಧಿಕಾರಿಯ ಪುತ್ರಿ ಜೋಹ್ರಾರನ್ನು ಉದ್ದೇಶಿಸಿ ಗಂಭೀರ್ ಟ್ವೀಟ್ ಮಾಡಿದ್ದು, ಜೊಹ್ರಾಳ ಸಂಪೂರ್ಣ ವಿದ್ಯಾಭ್ಯಾಸದ ವೆಚ್ಚವನ್ನು ತಾವೇ ಭರಿಸುವುದಾಗಿ ಹೇಳಿದ್ದಾರೆ.
"ಪುತ್ರಿ ಜೊಹ್ರಾ, ನಿನ್ನ ತಂದೆಯ ಸ್ಥಾನದಲ್ಲಿ ನಿಂತು ನಿನಗೆ ನಾನು ಜೋಗುಳ ಹಾಡಲು ಸಾಧ್ಯವಾಗದೇ ಇರಬಹುದು. ಆದರೆ ನೀನು ನಿನ್ನ ಕನಸನ್ನು ಬೆನ್ನು ಹತ್ತಲು ನೆರವಾಗುತ್ತೇನೆ. ನಿನ್ನ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಜೀವನ ಪರ್ಯಂತ ನಾನೇ ಭರಿಸುತ್ತೇನೆ. ನಿನ್ನ ತಂದೆ ಸಾವಿನಿಂದಾಗಿ ನಿನಗೆ ಅತೀವ ದುಃಖವಾಗಿದೆ ಎಂದು ಗೊತ್ತು. ಆದರೆ ನಿನ್ನ ಕಣ್ಣೀರಿನ ಭಾರವನ್ನು ಬಹಶಃ ಭೂತಾಯಿ ಕೂಡ ಹೊರಲಾರಳೇನೋ? ನಿನ್ನ ತಂದೆಯ ಸಾಹಸಕ್ಕೆ ನನ್ನದೊಂದು ಸೆಲ್ಯೂಟ್"... ಎಂದು ಗಂಭೀರ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics