ದೇಶ

ಉ.ಪ್ರದೇಶ ವಿಧಾನಸಭೆಯಲ್ಲಿ ಸಿಕ್ಕಿದ್ದು ಸ್ಫೋಟಕ ವಸ್ತುವಲ್ಲ, ಸಿಲಿಕಾನ್!

Manjula VN
ಲಖನೌ: ಉತ್ತರಪ್ರದೇಶ ರಾಜ್ಯದ ವಿಧಾನಸಭೆಯೊಳಗೆ ಜು.12ರಂದು ದೊರಕಿದ್ದ ಸಂಶಯಾಸ್ಪದ ಪುಡಿ ಅತ್ಯಂತ ಅಪಾಯಕಾರಿ ಸ್ಫೋಟಕ 'ಪಿಇಟಿಎನ್' ಅಲ್ಲ ಎಂಬ ವಿಷಯ ಇದೀಗ ಬೆಳಕಿಗೆ ಬಂದಿದೆ. 
ಈ ಹಿಂದೆ ಸಂಶಯಾಸ್ಪದ ಪುಡಿ ಪರೀಕ್ಷಿಸಿದ್ದ ಲಖನೌದ ವಿಧಿವಿಜ್ಞಾನ ಪ್ರಯೋಗಾಲಯ, ಅದನ್ನು ಭಾರೀ ಸ್ಫೋಟದ ಸಾಮರ್ಥ್ಯ ಹೊಂದಿರುವ ಪಿಇಟಿಎನ್ ಎಂದು ಹೇಳಿತ್ತು. 
ಈ ಹಿನ್ನಲೆಯಲ್ಲಿ ಪ್ರಕರಣದ ತನಿಖೆ ಹೊಣೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗಿತ್ತು. ಬಳಿಕ ಎನ್ಐಎ ಸಂಶಯಾಸ್ಪದ ಪುಡಿಯನ್ನು ಹೈದರಾಬಾದ್ ನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿತ್ತು. 
ಇದೀಗ ಹೈದರಾಬಾದ್ ಪ್ರಯೋಗಾಲಯ ವರದಿ ನೀಡಿದ್ದು, ಶಂಕಾಸ್ಪದ ಪುಡಿಯನ್ನು ಸಿಲಿಕಾನ್ ಅಕ್ಲೈಡ್ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ, 2016ಕ ಮಾರ್ಚ್ ತಿಂಗಳಿನಲ್ಲೇ ವಾಯಿದೆ ಮುಗಿದ ಕಿಟ್ ಅನ್ನು ಲಖನೌ ಪ್ರಯೋಗಾಲಯ ಬಳಸಿದ್ದರಿಂದ ತಪ್ಪು ವರದಿ ಬಂದಿರುವುದು ಇದರಿಂದ ಗೊತ್ತಾಗಿದೆ. 
ಈ ಹಿನ್ನಲೆಯಲ್ಲಿ ತಪ್ಪು ವರದಿ ನೀಡಿದ್ದ ಲಖನೌ ಪ್ರಯೋಗಾಲಯದ ನಿರ್ದೇಶಕ ಶಿವ ಬಿಹಾರಿ ಉಪಾಧ್ಯಾಯ ಅವರನ್ನು ಉತ್ತರಪ್ರದೇಶ ರಾಜ್ಯ ಸರ್ಕಾರ ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ. 
SCROLL FOR NEXT