ಹೇಗ್: 103 ವರ್ಷದ ವಿಶ್ವ ಪರಂಪರೆಯ ಸ್ಮಾರಕ ವಾಸ್ಸೆನರ್ ನಲ್ಲಿರುವ, ಇಂಡಿಯಾ ಹೌಸ್ ಗೆ ಇದೇ ಪ್ರಥಮ ಬಾರಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಸಿಗಲಿದೆ.
ಸ್ಮಾರಕಗಳ ದಿನವಾದ ಸೆಪ್ಟೆಂಬರ್ 9ರಂದು ಇಂಡಿಯಾ ಹೌಸ್ ಸಾರ್ವಜನಿಕ ದರ್ಶನ ಲಭ್ಯವಾಗಲಿದೆ.
1953 ರಿಂದಲೂ ವಾಸ್ಸೆನರ್ ನಲ್ಲಿರುವ ವಿಲ್ಲಾ ಮೇಯ್ಲಾಂಡ್ ಅಥವಾ ಇಂಡಿಯಾ ಹೌಸ್ ಭಾರತದ ರಾಯಭಾರಿಗಳ ಅಧಿಕೃತ ನಿವಾಸವಾಗಿದೆ. 1914 ರಲ್ಲಿ ಇದನ್ನು ನಿರ್ಮಿಸಲಾಗಿದೆ, ಇದನ್ನು ರಾಷ್ಟ್ರೀಯ ಸ್ಮಾರಕವೆಂದು ಗುರುತಿಸಲಾಗಿದೆ ಮತ್ತು 2002 ರಿಂದ ವಿಶ್ವ ಪರಂಪರೆ ಸ್ಮಾರಕಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.
ಬ್ಯಾಕ್ಕರ್ಶೆಲಾನ್ 19, 2243 ಎಬಿ, ವಾಸ್ಸೆನರ್ ನಲ್ಲಿರುವ ಇಂಡಿಯಾ ಹೌಸ್ ಸೆಪ್ಟೆಂಬರ್ 9, 2017 ರಂದು ಬೆಳಗ್ಗೆ ಹನ್ನೊಂದರಿಂದ ಸಂಜೆ ಐದರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.