ದೇಶ

ಶ್ರೀನಗರ: ಜೆಕೆಎಲ್ಎಫ್ ಅಧ್ಯಕ್ಷ ಯಾಸೀನ್ ಮಲಿಕ್ ಬಂಧಿಸಿದ ಎನ್ಐಎ

Vishwanath S
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ ಅಧ್ಯಕ್ಷ, ಪ್ರತ್ಯೇಕತವಾದಿ ಯಾಸೀನ್ ಮಲಿಕ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಬಂಧಿಸಿದೆ. 
ದೆಹಲಿಯಲ್ಲಿನ ಎನ್ಐಎ ಕೇಂದ್ರ ಕಚೇರಿ ಮುಂದೆ ಸೆಪ್ಟೆಂಬರ್ 9ರಂದು ಪ್ರತಿಭಟನೆ ನಡೆಸುವುದಾಗಿ ಯಾಸೀನ್ ಮಲಿಕ್, ಸೈಯದ್ ಅಲಿ ಶಾ ಗಿಲಾನಿ ಮತ್ತು ಉಮರ್ ಫರೂಕ್ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಯಾಸೀನ್ ಮಲಿಕ್ ನನ್ನು ಬಂಧಿಸಿದ್ದಾರೆ. 
ಭಾರತದಲ್ಲಿ ಭಯೋತ್ಪಾದನಾ ಕೃತ್ಯವೆಸಗಲು ಪಾಕಿಸ್ತಾನ ಕಾಶ್ಮೀರದಲ್ಲಿರುವ ಪ್ರತ್ಯೇಕತಾವಾದಿಗಳಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ರಾಜಧಾನಿ ದೆಹಲಿ ಸೇರಿದಂತೆ ಕಾಶ್ಮೀರದ ಹಲವೆಡೆ ಏಕಕಾಲದಲ್ಲಿ ದಾಳಿ ನಡೆಸಿತ್ತು. 
ಪ್ರತ್ಯೇಕತವಾದಿ ನಾಯಕ ಶಬ್ಬೀರ್ ಶಾ ಪಿಎ ಜಮೀರ್ ಠಾಕೂರ್ ಮನೆ ಸೇರಿದಂತೆ ದೆಹಲಿ ಹಾಗೂ ಕಾಶ್ಮೀರದ ಒಟ್ಟು 16 ಪ್ರದೇಶಗಳ ಮೇಲೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. 
SCROLL FOR NEXT