ದೇಶ

ಫೆರಾ ಪ್ರಕರಣ: ಅಭಿಷೇಕ್ ವರ್ಮಾ ಗೆ ಆರು ತಿಂಗಳ ಜೈಲು ಶಿಕ್ಷೆ

Raghavendra Adiga
ನವದೆಹಲಿ: 1999 ರ ಫೆರಾ ಉಲ್ಲಂಘನೆಯ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ನಡೆಸಿದ್ದು ವಿವಾದಾತ್ಮಕ ಶಸ್ತ್ರಾಸ್ತ್ರ ವಿತರಕ ಅಭಿಷೇಕ್ ವರ್ಮಾ ಗೆ ಆರು ತಿಂಗಳ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ..
ಆದಾಗ್ಯೂ, ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಜ್ಯೋತಿ ಕ್ಲರ್ ಅಭಿಷೇಕ್ ಈ ಹಿಂದೆಯೇ ಜೈಲುವಾಸ ಅನುಭವಿಸಿದ್ದ ಕಾರಣ ಅವರು ಪುನಃ ಜೈಲುವಾಸ ಶಿಕ್ಷೆ ಅನುಭವಿಸುವುದರ ಅಗತ್ಯ ಇಲ್ಲ ಎಂದು ಅಭಿಪ್ರಾಯ ಪಟ್ಟರು ಎಂದು ಜಾರಿ ನಿರ್ದೇಶನಾಲಯ ಸಲಹೆಗಾರ ಎನ್ ಕೆ ಮಟ್ಟಾ ತಿಳಿಸಿದ್ದಾರೆ.
ವರ್ಮಾಗೆ ನ್ಯಾಯಾಲಯ 2000ರೂ. ದಂಡವನ್ನು ವಿಧಿಸಿದೆ. ವಾದಗಳ ಕಾಲ, ವರ್ಮಾ ಸಮನ್ಸ್ ಗೆ ಪ್ರತಿಕ್ರಯಿಸದೆ ಇದ್ದ ಕಾರಣ, ತನಿಖೆ ಸ್ಥಗಿತಗೊಂಡಿತ್ತು ಎಂದು ಎನ್ ಕೆ ಮಟ್ಟಾ ತಿಳಿಸಿದ್ದಾರೆ.
ತನಿಖಾ ಸಂಸ್ಥೆ ಪ್ರಕಾರ, ತನಿಖೆಗಾಗಿ ವರ್ಮಾ ಅವರ ಉಪಸ್ಥಿತಿಯನ್ನು ಕೋರಿ ನ್ಯಾಯಾಲಯಕ್ಕೆ ಡಿಸೆಂಬರ್ 14, 1999 ರಂದು ದೂರು ಸಲ್ಲಿಸಲಾಯಿತು. ಅವರು ಉದ್ದೇಶಪೂರ್ವಕವಾಗಿ ವಿಚಾರಣೆಗೆ ಗೈರಾಗುತ್ತಿದ್ದರು ಮತ್ತು ವಿದೇಶಿ ವಿನಿಮಯ ನಿಯಂತ್ರಣ ಕಾಯಿದೆ ಅಡಿಯಲ್ಲಿ ಅಪರಾಧ ಎಸಗಿದ್ದರು ಎಂದು ಹೇಳಿದರು.
ಏಜೆನ್ಸಿಯ ತನಿಖಾ ಅಧಿಕಾರಿಯ ಮುಂದೆ ಹಾಜರಾಗಲು ವರ್ಮಾಗೆ ಜುಲೈ ಮತ್ತು ನವೆಂಬರ್ 1999 ರೊಳಗೆ ಏಳು ಸಮನ್ಸ್ ಜಾರಿ ಮಾಡಲಾಗಿತ್ತು. ಆ ಏಳೂ ಸಮನ್ಸ್ ಗಳನ್ನು ವರ್ಮಾ ಉಲ್ಲಂಘಿಸಿದ್ದಕ್ಕಾಗಿ ಜಾರಿ ನಿರ್ದೇಶನಾಲಯ ದೂರು ದಾಖಲಿಸಿತ್ತು.
ಹಲವಾರು ನ್ಯಾಯಾಲಯಗಳಲ್ಲಿ ವಿವಿಧ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ ಮತ್ತು ವಂಚನೆ ಪ್ರಕರಣಗಳಲ್ಲಿ ವರ್ಮಾ ವಿಚಾರಣೆ ಎದುರಿಸುತ್ತಿದ್ದಾರೆ.
SCROLL FOR NEXT