ನವದೆಹಲಿ: ಭಾರತವಾಗಿರಲೀ ಚೀನಾ ಆಗಿರಲೀ 21 ನೇ ಶತಮಾನ ಏಷ್ಯಾಗೆ ಸೇರಿದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೀನದಯಾಳ್ ಉಪಾಧ್ಯಾಯರ ಜನ್ಮ ಶತಮಾನೋತ್ಸವ ಹಾಗೂ ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ್ದರ 125 ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಸೆ.11 ರಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ಮೋದಿ, 21 ನೇ ಶತಮಾನ ಭಾರತ-ಚೀನಾಗೆ ಸೇರಿದ್ದು ಎಂದು ಹೇಳಿದ್ದಾರೆ.
"ಕಾಲೇಜುಗಳಲ್ಲಿ ರೋಸ್ ಡೇ ಆಚರಣೆಗೆ ತಾವು ವಿರುದ್ಧವಾಗಿಲ್ಲ. ಆದರೆ ಆಚರಣೆಗಳು ರೋಸ್ ಡೇ ಗಳಿಂದ ಕೇರಳ ದಿನ, ಪಂಜಾಬ್ ದಿನದಂತೆ ಆಯಾ ರಾಜ್ಯದ ಸಂಸ್ಕೃತಿಗೆ ತಕ್ಕಂತೆ ನಡೆಯಬೇಕು ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಮೊದಲು ಶೌಚಾಲಯ ನಿರ್ಮಿಸಿ ನಂತರ ದೇವಾಲಯ ನಿರ್ಮಿಸಿ
ಇದೇ ವೇಳೆ ಶುಚಿತ್ವದ ಬಗ್ಗೆಯೂ ಪ್ರಧಾನಿ ಮಾತನಾಡಿದ್ದು, ಮೊದಲು ಶೌಚಾಲಯಗಳನ್ನು ನಿರ್ಮಿಸಬೇಕು ನಂತರ ದೇವಾಲಯಗಳು ನಿರ್ಮಾಣವಾಗಲಿ ಎಂದು ಹೇಳಿದ್ದಾರೆ.