ಗೌರಿ ಲಂಕೇಶ್ (ಸಂಗ್ರಹ ಚಿತ್ರ) 
ದೇಶ

'ಗೌರಿ ಲಂಕೇಶ್' ಸ್ಥಿತಿ ಬರಬಾರದೆಂದರೆ ಮೃತ್ಯುಂಜಯ ಹೋಮ ಮಾಡಿಸಿ: ಕೇರಳ ಹಿಂದು ಐಕ್ಯ ವೇದಿ ಅಧ್ಯಕ್ಷೆ

ರಾಜ್ಯದಲ್ಲಿರುವ ಜ್ಯಾತ್ಯಾತೀತ ಲೇಖಕರಿಗೆ ಪತ್ರಕರ್ತೆ ಗೌರಿ ಲಂಕೇಶ್'ಗೆ ಎದುರಾದ ಸ್ಥಿತಿ ಬರಬಾರದು ಎಂಬುದಾದರೆ ಮೃತ್ಯುಂಜಯ ಹೋಮ ಮಾಡಿಸಿ ಎಂದು ಕೇರಳ ಹಿಂದು ಐಕ್ಯ ವೇದಿ ಅಧ್ಯಕ್ಷೆ ಕೆ.ಪಿ. ಶಶಿಕಲಾ ಟೀಚರ್ ಅವರು...

ತಿರುವನಂತರಪುರ: ರಾಜ್ಯದಲ್ಲಿರುವ ಜ್ಯಾತ್ಯಾತೀತ ಲೇಖಕರಿಗೆ ಪತ್ರಕರ್ತೆ ಗೌರಿ ಲಂಕೇಶ್'ಗೆ ಎದುರಾದ ಸ್ಥಿತಿ ಬರಬಾರದು ಎಂಬುದಾದರೆ ಮೃತ್ಯುಂಜಯ ಹೋಮ ಮಾಡಿಸಿ ಎಂದು ಕೇರಳ ಹಿಂದು ಐಕ್ಯ ವೇದಿ ಅಧ್ಯಕ್ಷೆ ಕೆ.ಪಿ. ಶಶಿಕಲಾ ಟೀಚರ್ ಅವರು ಸಲಹೆ ನೀಡಿರವುದು ಇದೀಗ ವಿವಾದಕ್ಕೆ ಕಾರಣವಾಗಿದೆ. 
ಹಿಂದು ಐಕ್ಯಾ ವೇದಿ ವಿವಿಧ ಹಿಂದು ಪರ ಸಂಘಟನೆಗಳ ಒಕ್ಕೂಟವಾಗಿದೆ. ಸೆ.8 ರಂದು ಐಕ್ಯ ವೇದಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಶಶಿಕಲಾ ಅವರು ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ. 
ಆರ್'ಎಸ್ಎಸ್ ತಮ್ಮ ತತ್ವ ಸಿದ್ಧಾಂತಗಳನ್ನು ವಿರೋಧಿಸವವರನ್ನು ಹತ್ಯೆ ಮಾಡಲು ಬಯಸುವುದಿಲ್ಲ. ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ದುರ್ಬಲವಾಗಿರುವುದರಿಂದ ಆ ಪಕ್ಷಕ್ಕೆ ಇಂತಹ ಹತ್ಯೆ ಬೇಕಿತ್ತು. ಆದ್ದರಿಂದ ಜಾತ್ಯತೀತ ಲೇಖಕರು ಹೆಚ್ಚು ಕಾಲ ಬದುಕಬೇಕು ಅಂದರೆ, ಮೃತ್ಯುಂಜಯ ಹೋಮ ಮಾಡಿಸುವುದು ಒಳ್ಳೆಯದು. ಇಲ್ಲದೇ ಹೋದರೆ ಗೌರಿ ಲಂಕೇಶ್ ಎದುರಾದ ಸ್ಥಿತಿ ಎದುರಾಗುತ್ತದೆ ಎಂದು ಹೇಳಿದ್ದಾರೆ. 
ಹಿಂದುತ್ವವನ್ನು ವಿರೋಧಿಸಲು ಕೃತಕ ಪರಿಸ್ಥಿತಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಸಂಘ ಪರಿವಾರ ವಿರೋಧಿಸುವುದು ಅವರಿಗೆ ಬೇಕಾಗಿದೆ. ಇದೀಗ ಮತ್ತೊಬ್ಬರ ಹತ್ಯೆಯಾಗಿದೆ. ಕರ್ನಾಟಕದಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯಾಗಿದೆ. ಗೌರಿಯವರನ್ನು ಆರ್'ಎಸ್ಎಸ್ ಹತ್ಯೆ ಮಾಡಿದೆ ಎಂದು ಆರೋಪ ಮಾಡಲಾಗುತ್ತಿದೆ. ಹತ್ಯೆ ಮಾಡಿದ ಆರೋಪಿಗಳು ಇನ್ನೂ ದೊರಕಿಲ್ಲ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಆರೋಪಿಯನ್ನು ಬಂಧನಕ್ಕೊಳಪಡಿಸಬೇಕು. ಆರ್'ಎಸ್ಎಸ್ ನ್ನು ವಿರೋಧಿಸಿದ ಕಾರಣಕ್ಕೆ ಆಕೆಯನ್ನು ಹತ್ಯೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. 
ಆರ್'ಎಸ್ಎಸ್'ನ್ನು ವಿರೋಧಿಸಿದ ಲೇಖಕರು ಮಾತ್ರ ಇಂದು ಗುರ್ತಿಸಿಕೊಳ್ಳುತ್ತಿದ್ದಾರೆ. ಆರ್'ಎಸ್ಎಸ್'ನ್ನು ವಿರೋಧಿಸದ ಲೇಖಕರ ಹೆಸರುಗಳನ್ನು ನೀವು ನೀಡಬಲ್ಲಿರಾ? ಆರ್'ಎಸ್ಎಸ್ ವಿರುದ್ಧ ಬರೆಯದೆ ಇರುವವರು ಒಬ್ಬರಾದರೂ ಇದ್ದಾರೆಯೇ:..? ಆರ್'ಎಸ್ಎಸ್ ವಿರುದ್ಧ ಬರೆದವರಿಗೆ ಮಾತ್ರ ಹಣ, ಪ್ರಶಸ್ತಿ, ಹೆಸರನ್ನು ನೀಡಲಾಗುತ್ತಿದೆ. ನೂರರಲ್ಲಿ 90ರಷ್ಟು ಲೇಖಕರು ಹೀಗೆಯೇ ಇದ್ದಾರೆ. ಹತ್ಯೆ ಸಂಸ್ಕೃತಿ ಆರ್ ಎಸ್ಎಸ್ ನದ್ದಲ್ಲ. ಆದರೆ ಆರ್ ಎಸ್ ಎಸ್ ಹತ್ಯೆ ಮಾಡಲು ಆರಂಭಿಸಿದರೆ ಸಿದ್ಧಾಂತಗಳ ವಿರುದ್ಧ ಮಾತನಾಡುವ ಲೇಖಕರ ಸಮೂಹವೇ ಇರುವುದಿಲ್ಲ. ಆರ್'ಎಸ್ಎಸ್ ವಿರುದ್ಧ ಬರೆದರೆ, ಆರ್'ಎಸ್ಎಸ್ ಬೆಳೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಸಾಮಾನ್ಯ ಜ್ಞಾನ ಸಂಘ ಪರಿವಾರಕ್ಕಿದೆ ಎಂದು ತಿಳಿಸಿದ್ದಾರೆ. 
ಶಶಿಕಲಾ ಆ ಅವರ ಈ ಹೇಳಿಕೆಗೆ ಕೇರಳ ಕಾಂಗ್ರೆಸ್ ಉಪಾಧ್ಯಕ್ಷ ವಿ.ಡಿ. ಸತೀಶನ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹೇಳಿಕೆ ಕುರಿತಂತೆ ಪೊಲೀಸರಿಗೆ ದೂರು ನೀಡಿದ್ದಾರೆ. ಶಶಿಕಲಾ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದ್ದಾರೆ. 
ಶಶಿಕಲಾ ಅವರ ಹೇಳಿಕೆ ಸಂಬಂಧ ಪ್ರತಿಕ್ರಿಯೆ ನೀಡಿರುವ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆವರು, ಈ ರೀತಿಯ ಹೇಳಿಕೆಗಳು ಸಮಾಜದಲ್ಲಿ ಆತಂಕವನ್ನು ಸೃಷ್ಟಿಸುತ್ತದೆ ಎಂದಿದ್ದಾರೆ. 
ಕೇರಳ ರಾಜ್ಯ ಬಿಜೆಪಿ ವಕ್ತಾರ. ಎಂ.ಎಸ್. ಕುಮಾರ್ ಅವರು ಮಾತನಾಡಿ, ಯಾವ ಹಿನ್ನಲೆಯಲ್ಲಿ ಶಶಿಕಲಾ ಅವರ ಈ ರೀತಿಯ ಹೇಳಿಕೆಯನ್ನು ನೀಡಿದ್ದಾರೆಂಬುದು ತಿಳಿದುಬಂದಿಲ್ಲ. ಪ್ರಸ್ತುತದ ಪರಿಸ್ಥಿತಿಯಲ್ಲಿ ಪ್ರತಿಕ್ರಿಯೆ ನೀಡಲು ಸರಿಯಲ್ಲ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!