ಬ್ರಹ್ಮಪುತ್ರ ಅ೦ಕಿ ಸ೦ಖ್ಯೆ ಮಾಹಿತಿ ಈಗ ಹಂಚಿಕೊಳ್ಳಲು ಸಾಧ್ಯವಿಲ್ಲ: ಚೀನಾ
ಈಗ ಬ್ರಹ್ಮಪುತ್ರ ವಿಷಯದಲ್ಲಿ ಚೀನಾ ಕ್ಯಾತೆ ತೆಗೆದಿದ್ದು, ಬ್ರಹ್ಮಪುತ್ರ ಜಲ ಯೋಜನೆಯ ಅಂಕಿ-ಅಂಶಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಬೀಜಿಂಗ್: ಡೋಕ್ಲಾಮ್ ವಿವಾದ ಅಂತ್ಯವಾಗುತ್ತಿದ್ದಂತೆಯೇ ಚೀನಾ ನಾಥುಲಾ ಪಾಸ್ ನ್ನು ಪುನಃ ತೆರೆಯುವುದಾಗಿ ಹೇಳಿತ್ತು. ಈಗ ಬ್ರಹ್ಮಪುತ್ರ ವಿಷಯದಲ್ಲಿ ಚೀನಾ ಕ್ಯಾತೆ ತೆಗೆದಿದ್ದು, ಬ್ರಹ್ಮಪುತ್ರ ಜಲ ಯೋಜನೆಯ ಅಂಕಿ-ಅಂಶಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ.
2006 ರಲ್ಲಿ ಸ್ಥಾಪಿಸಲಾಗಿದ್ದ ದ್ವಿಪಕ್ಷೀಯ ತಜ್ಞ ಮಟ್ಟದ ತಂಡ ಇದ್ದು, ಚೀನಾ ಭಾರತದೊಂದಿಗೆ ಬ್ರಹ್ಮಪುತ್ರ ಹಾಗೂ ಸಟ್ಲಜ್ ನದಿಯ ಜಲ ಯೋಜನೆಗಳ ಅಂಕಿ-ಅಂಶಗಳನ್ನು ಹಂಚಿಕೊಳ್ಳಬೇಕಿದೆ. ನದಿ ಅಂಕಿ-ಅಂಶಕ್ಕೆ ಸಂಬಂಧಿಸಿದಂತೆ ದೀರ್ಘಾವಧಿಯಿಂದ ಭಾರತದೊಂದಿಗೆ ಸಹಕರಿಸಿದ್ದೇವೆ. ಆದರೆ ಚೀನಾದಲ್ಲಿ ಈಗ ನದಿಯ ಸಂಬಂಧಿತ ಅಂಕಿ-ಅಂಶಗಳನ್ನು ಸಂಗ್ರಹಿಸುವ ಪರಿಸ್ಥಿತಿ ಇಲ್ಲವಾದ್ದರಿಂದ ಬ್ರಹ್ಮಪುತ್ರ ಅ೦ಕಿ ಸ೦ಖ್ಯೆ ಮಾಹಿತಿ ಈಗ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಚೀನಾ ವಿದೇಶಾಂಗ ಇಲಾಖೆ ಹೇಳಿದೆ.