ದೆಹಲಿಯ ಪಟಾಕಿ ಅಂಗಡಿ 
ದೇಶ

ದೆಹಲಿ-ಎನ್ ಸಿಆರ್ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ: ಸುಪ್ರೀಂ ಕೋರ್ಟ್ ಆದೇಶದಲ್ಲಿ ಮಾರ್ಪಾಡು

ಕಳೆದ ವರ್ಷ ನವೆಂಬರ್ ನಲ್ಲಿ ರಾಷ್ಟ್ರ ರಾಜಧಾನಿ ವಲಯ (ಎನ್ ಸಿಆರ್) ದಲ್ಲಿ ಪಟಾಕಿ ಮಾರಾಟ ಶಾಶ್ವತ ಪರವಾನಗಿಗಳನ್ನು ಅಮಾನತು ಗೊಳಿಸುವ ಆದೇಶವನ್ನು ಮಾರ್ಪಡಿಸಿ ಸುಪ್ರೀಂ ಕೋರ್ಟ್ ಹೊಸ ಆದೇಶ ನೀಡಿದೆ.

ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ  ರಾಷ್ಟ್ರ  ರಾಜಧಾನಿ ವಲಯ (ಎನ್ ಸಿಆರ್) ದಲ್ಲಿ ಪಟಾಕಿ ಮಾರಾಟ ಶಾಶ್ವತ ಪರವಾನಗಿಗಳನ್ನು ಅಮಾನತು ಗೊಳಿಸುವ ಆದೇಶವನ್ನು ಮಾರ್ಪಡಿಸಿ ಸುಪ್ರೀಂ ಕೋರ್ಟ್ ಹೊಸ  ಆದೇಶ ನೀಡಿದೆ.
ಕಾಲಮಿತಿಗೆ ಒಳಪಟ್ಟು ಪಟಾಕಿ ಮಾರಾಟ ಕ್ಕೆ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.  ದೀಪಾವಳಿಯ ನಂತರ ದೆಹಲಿ ವಾಯುಗುಣದಲ್ಲಿನ ರಾಸಾಯನಿಕ ಪ್ರಮಾಣವನ್ನು ಪರಿಶೀಲಿಸಿ ಮುಂದಿನ ಆದೇಶ ನೀಡುವುದಾಗಿ ಅದು ತಿಳಿಸಿದೆ.
ನ್ಯಾಯಾಧೀಶರಾದ ಎಂ ಬಿ ಲೋಕೂರ್ ಮತ್ತು ದೀಪಕ್ ಗುಪ್ತಾ ಒಳಗೊಂಡ ಪೀಠವು ಒಬ್ಬೊಬ್ಬರೇ ಪತಾಕಿ ಹಚ್ಚಿ ಸಂಭ್ರಮಿಸುವ ಬದಲು ಜನ ಸಮುದಾಯ ಒಟ್ಟಾಗಿ ಪಟಾಕಿ ಸಿಡಿಸುವ ಸಂಭ್ರಮದಲ್ಲಿ ಬಾಗವಹಿಸುವಂತೆ ಕೇಂದ್ರ ಸರ್ಕಾರ, ಸಂಬಂಡ ಪಟ್ಟ ಅಧಿಕಾರಿಗಳು ಪ್ರೋತ್ಸಾಹ ನೀಡಬೇಕೆಂದು ಹೇಳಿದೆ.
ದಸರಾ ಮತ್ತು ದೀಪಾವಳಿ ಹಬ್ಬದ ಸಮಯದಲ್ಲಿ ಜನರ ಆರೋಗ್ಯದ ಮೇಲೆ ಪಟಾಕಿಯ  ಪರಿಣಾಮವನ್ನು ಅಧ್ಯಯನ ನಡೆಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಜಿ) ಅಧ್ಯಕ್ಷರು ನೇತೃತ್ವ ವಹಿಸಬೇಕೆಂದು ಉನ್ನತ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ.
ಆದರೆ ಈಗಾಗಲೇ ನೀಡಿರುವ ಪರವಾನಗಿಯಲ್ಲಿ ಶೇ. 50 ರಷ್ಟನ್ನು ರದ್ದುಗೊಳಿಸಬೇಕು. ಒಟ್ತಾರೆ ದೆಹಲಿ ಎನ್ ಸಿಆರ್ ಪ್ರದೇಶದಲ್ಲಿ  500.ಪರವಾನಗಿ ಮಾತ್ರ ಹೊಂದಲು ಅನುಮತಿ ನೀದಬೇಕೆಂದು ದೆಹಲಿ ಪೋಲೀಸರಿಗೆ ಕೋರ್ಟ್ ಆದೇಶಿಸಿದೆ.
"2016 ರ ನವೆಂಬರ್ 11 ರ ನಿರ್ದೇಶಿಸಿದಂತೆ ಶಾಶ್ವತ ಪರವಾನಗಿಯನ್ನು ಅಮಾನತ್ ಗೊಳಿಸುವ ಆದೇಶವನ್ನು ಈ ಮೂಲಕ ತೆಗೆದು ಹಾಕಲಾಗಿದೆ" ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT