ದೇಶ

ಹಿಂದು ವಿವಾಹ ಕಾಯ್ದೆ: 6 ತಿಂಗಳ ಕಾಯುವಿಕೆ ಕಡ್ಡಾಯವಲ್ಲ, ಸುಪ್ರೀಂ ಮಹತ್ವದ ತೀರ್ಮಾನ

Raghavendra Adiga
ನವದೆಹಲಿ: ಹಿಂದೂ ವಿವಾಹ ಕಾಯ್ದೆಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿರುವ ಸುಪ್ರೀಂ ಕೋರ್ಟ್‌, ವಿಚ್ಚೇದನ ಸಂದರ್ಭದಲ್ಲಿ  "6 ತಿಂಗಳ ಕಾಯುವಿಕೆ' ಕಕಡ್ಡಾಯವಲ್ಲ ಎಂದು ಮಹಣ್ತೀದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಆದರ್ಶ್‌ ಕೆ. ಗೋಯಲ್‌ ಮತ್ತು ನ್ಯಾಯಮೂರ್ತಿ ಉದಯ್‌ ಯು. ಲಲಿತ್‌  ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಈ ತೀರ್ಪು ನೀಡಿದ್ದು, ಪತಿ-ಪತ್ನಿ ಒಪ್ಪಿ ಸ್ವಯಂ ಪ್ರೇರಿತವಾಗಿ ವಿಚ್ಛೇದನಕ್ಕೆ ಮುಂದಾದರೆ 6 ತಿಂಗಳು ಕಾಯುವ ಆವಶ್ಯಕತೆ ಇಲ್ಲ ಎಂದು ಹೇಳಿದೆ.
ಪತಿ, ಪತ್ನಿ ಬೇರೆ ಬೇರೆಯಾಗಿ ಒಂದು ವರ್ಷವಾಯಿತು, ಹೀಗಾಗಿ ವಿಚ್ಚೇದನ ನೀಡಿ ಎಂದು ಕೇಳುವ ಅಗತ್ಯವೂ ಇಲ್ಲ ಎಂದಿದೆ. 
ಅಂದರೆ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13(ಬಿ) ನಲ್ಲಿ 18 ತಿಂಗಳು ಕಾಯುವಿಕೆ ಅವಧಿ ಅನಂತರ ವಿಚ್ಚೇದನ ಕೊಡಬಹುದು ಎಂದಿದೆ.
ಸೆಕ್ಷನ್‌ 13(1)ರಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸುವ ಮುನ್ನ ಪತಿ, ಪತ್ನಿ ಒಂದು ವರ್ಷ ಬೇರೆ ಬೇರೆಯಾಗಿರಬೇಕು ಎಂದಿದೆ. ಹಾಗೆಯೇ ಸೆಕ್ಷನ್‌ 13ಬಿ(2)ನಲ್ಲಿ ವಿಚ್ಛೇದನ ಪ್ರಕ್ರಿಯೆ ಶುರುವಾದ ಮೇಲೆ ಆರು ತಿಂಗಳು ಪುನಃ ಜತೆಯಾಗಿರಬೇಕು. ಅಂದರೆ ಒಟ್ಟಾರೆ 18 ತಿಂಗಳುಗಳ ಕಾಲ ಒಟ್ಟಾಗಿರಬೇಕು ಎಂದು ಉಲ್ಲೇಖಿಸಲಾಗಿದೆ
ಪತಿ-ಪತ್ನಿ ಪರಸ್ಪರ ಒಪ್ಪಿಗೆಯಿಂದಲೇ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸುವ ಮುನ್ನ  ಒಂದು ವರ್ಷ ಹಾಗೂ ಅನಂತರ ಆರು ತಿಂಗಳು ಜತೆಯಲ್ಲಿ ಇರಬೇಕು ಎಂಬ ನಿಯಮಗಳನ್ನೇ ಇದೀಗ ಸುಪ್ರೀಂ ಕೋರ್ಟ್‌ ತೆಗೆದು ಹಾಕಿದೆ.
ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್‌ 13ಬಿ ಪ್ರಕಾರ ಪರಸ್ಪರ ಒಪ್ಪಿಗೆ ಇದ್ದರೆ ವಿಚ್ಚೇದನ ಕೊಡಬಹುದು ಎಂದಿದೆ. ಆದರೆ ಪತಿ-ಪತ್ನಿಗೆ ಒಟ್ಟಾಗಿ ಬದುಕುವುದೇ ಅಸಾಧ್ಯವೆಂಬ ಪರಿಸ್ಥಿತಿ ನಿರ್ಮಾಣವಾದಾಗ ವಿಚ್ಚೇದನ ನೀಡಬಹುದು ಎಂದು ಉಲ್ಲೇಖವಿದೆ..
ಕಾಯ್ದೆಯ ಪ್ರಕಾರ, ಆರು ತಿಂಗಳ ಅವಧಿ ಇರುವುದು ತೀರಾ ಅವಸರದಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದು ಎನ್ನುವ ಕಾರಣಕ್ಕಾಗಿ ಇದೆ. ಈ ಅಂಶ ಚೆನ್ನಾಗಿಯೇ ಇದೆ. ಆದರೆ, ಪತಿ-ಪತ್ನಿಗೆ ಜತೆಯಲ್ಲಿ ಬಾಳಲು ಸಾಧ್ಯವೇ ಇಲ್ಲ ಎಂದು ಅರಿವಾದ ಮೇಲೆ ಜತೆಯಲ್ಲಿ ಬದುಕು ನಡೆಸಿ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಹೀಗಾಗಿ ಈ 'ಕೂಲಿಂಗ್‌ ಆಫ್' ಅವಧಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಹಾಗೆಂದು ಎಲ್ಲಾ ವಿಚ್ಚೇದನ ಪ್ರಕರಣ್ಗಳಲ್ಲಿ ತಕ್ಷಣ ವಿಚ್ಚೇದನ ನೀಡುವಂತಿಲ್ಲ. ಆಯಾ ಪರಿಸ್ಥಿತಿಗಳಿಗೆ ಅನುಗುಣವಾಗಿಯೇ ತೀರ್ಪು ನೀದಬೇಕೆಂದು ಸರ್ವೋಚ್ಚ ನ್ಯಾಯಾಲಯ ತನ್ನ ಕೆಳಗಿನ ನ್ಯಾಯಾಲಯಗಳಿಗೆ ಆದೇಶಿಸಿದೆ.
SCROLL FOR NEXT