ದೇಶ

ತೆಲಂಗಾಣ ಶಾಲೆಗಳಲ್ಲಿ 1ರಿಂದ 12ನೇ ತರಗತಿವರೆಗೆ ತೆಲುಗು ಕಡ್ಡಾಯ: ಸಿಎಂ ಕೆಸಿಆರ್

Lingaraj Badiger
ಹೈದರಾಬಾದ್: ಕರ್ನಾಟಕ, ತಮಿಳುನಾಡು ಹಾಗೂ ಒಡಿಶಾ ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ನೆರೆಯ ನೂತನ ರಾಜ್ಯ ತೆಲಂಗಾಣದ ಎಲ್ಲಾ ಶಾಲೆಗಳಲ್ಲಿ 1ನೇ ತರಗತಿಯಿಂದ 12ನೇ ತರಗತಿವರೆಗೆ ತೆಲುಗು ಕಲಿಕೆಯನ್ನು ಕಡ್ಡಾಯಗೊಳಿಸಲಾಗಿದೆ.
ಮುಂದಿನ ಶೈಕ್ಷಣಿಕ ವರ್ಷದಿಂದ ತೆಲಂಗಾಣದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 1ನೇ ತರಗತಿಯಿಂದ 12ನೇ ತರಗತಿವರೆಗೆ ತೆಲುಗು ಕಡ್ಡಾಯಗೊಳಿಸಲಾಗುತ್ತಿದ್ದು, ಇದನ್ನು ಜಾರಿಗೆ ತರದ ಶಾಲೆಯ ಮಾನ್ಯತೆಯನ್ನು ರದ್ದುಗೊಳಿಸುವುದಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮಂಗಳಾರ ಹೇಳಿದ್ದಾರೆ.
ವಿಶ್ವ ತೆಲುಗು ಸಮ್ಮೇಳನದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರಾಜ್ಯದ ಶಾಲೆಗಳಲ್ಲಿ ತೆಲುಗು ಕಲಿಕೆ ಕಡ್ಡಾಯಗೊಳಿಸುವ ಸಂಬಂಧ ಮುಂದಿನ ಸಂಪುಟ ಸಭೆಯಲ್ಲಿ ನಿಲುವಳಿ ಅಂಗೀಕರಿಸುವುದಾಗಿ ತಿಳಿಸಿದ್ದಾರೆ.
ಪ್ರಸ್ತೂತ ತೆಲಂಗಾಣದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗೆ ಮಾತ್ರ ತೆಲುಗು ಕಡ್ಡಾಯಗೊಳಿಸಲಾಗಿದೆ.
SCROLL FOR NEXT