ನೋಟಾ 
ದೇಶ

ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಚುನಾವಣೆ: ನೋಟಾಗೆ 3 ನೇ ಸ್ಥಾನ!

ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆ ಚುನಾವಣೆ ಮುಕ್ತಾಯಗೊಂಡು ಪ್ರಕಟಗೊಂಡ ಫಲಿತಾಂಶದಲ್ಲಿ ನೋಟ ವಿದ್ಯಾರ್ಥಿಗಳ ಮೂರನೇ ಆಯ್ಕೆಯಾಗಿದೆ ! ಅಷ್ಟೇ ಅಲ್ಲದೇ ದೆಹಲಿ....

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆ ಚುನಾವಣೆ ಮುಕ್ತಾಯಗೊಂಡು ಪ್ರಕಟಗೊಂಡ ಫಲಿತಾಂಶದಲ್ಲಿ ನೋಟ ವಿದ್ಯಾರ್ಥಿಗಳ ಮೂರನೇ ಆಯ್ಕೆಯಾಗಿದೆ ! ಅಷ್ಟೇ ಅಲ್ಲದೇ ದೆಹಲಿ ವಿಶ್ವವಿದ್ಯಾನಿಲಯದ ಮೂರನೇ ವಿದ್ಯಾರ್ಥಿ ಸಂಘಟನೆಯಾಗಿ ನೋಟಾ ಹೊರಹೊಮ್ಮಿದೆ. 
ಮತದಾನದ ವ್ಯವಸ್ಥೆಯಲ್ಲಿ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ನೋಟಾ ಆಯ್ಕೆ ನೀಡಲಾಗಿದೆ. ಎಬಿವಿಪಿ ಸಂಘಟನೆಗಿಂತ ಕಾಂಗ್ರೆಸ್ ಬೆಂಬಲಿತ ಎನ್ಎಸ್ ಯುಐ ಎರಡು ಸ್ಥಾನಗಳನ್ನು ಹೆಚ್ಚು ಗೆದ್ದಿದೆ. ಆದರೆ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನೋಟಾ ಆಯ್ಕೆ 3 ನೇ ಸ್ಥಾನ ಪಡೆದಿದ್ದು 5162 ಮತಗಳನ್ನು ಪಡೆದಿದೆ. ಗೆದ್ದ ಅಭ್ಯರ್ಥಿ ರಾಕಿ 16299 ಮತಗಳನ್ನು ಪಡೆದಿದ್ದಾರೆ ಹಾಗೂ ಎರಡನೇ ಸ್ಥಾನ ಗಳಿಸಿರುವ ರಜತ್ ಚೌಧರಿ 14709 ಮತಗಳನ್ನು ಪಡೆದಿದ್ದಾರೆ. 
ಕಾರ್ಯದರ್ಶಿ ಸ್ಥಾನಕ್ಕೆ ನೋಟಾ ಆಯ್ಕೆ 7891 ಮತಗಳು ಚಲಾವಣೆಯಾಗಿದ್ದರೆ, ಗೆದ್ದ ಅಭ್ಯರ್ಥಿ ಮಹಮೇಧ 17156 ಮತಗಳನ್ನು ಗಳಿಸಿದ್ದಾರೆ, ಎರಡನೇ ಸ್ಥಾನದಲ್ಲಿರುವ ಅಭ್ಯರ್ಥಿ ಮೀನಾಕ್ಷಿ ಮೀನಾ 14532 ಮತಗಳನ್ನು ಗಳಿಸಿದ್ದಾರೆ. ಜಂಟಿ ಕಾರ್ಯದರ್ಶಿ ಹುದ್ದೆಯಲ್ಲಿಯೂ ನೋಟಾ ಮೂರನೇ ಆಯ್ಕೆಯಾಗಿದ್ದು ಒಟ್ಟಾರೆ ಚುನಾವಣೆಯಲ್ಲಿ ನೋಟಾ ವಿದ್ಯಾರ್ಥಿಗಳ ಮೂರನೇ ಆಯ್ಕೆಯಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT