ದೇಶ

ಮೃತ ಬಾಲಕನಿಗೆ ಶ್ರದ್ಧಾಂಜಲಿ ಸಲ್ಲಿಸಲು ರ‍್ಯಾನ್ ಇಂಟರ್'ನ್ಯಾಷನಲ್ ಶಾಲೆ ವೆಬ್ ಸೈಟ್ ಹ್ಯಾಕ್!

Srinivasamurthy VN
ಗುರುಗಾಂವ್: ಗುರುಗಾಂವ್ ನ ಶಾಲಾ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹ್ಯಾಕರ್ಸ್ ಗಳ ತಂಡವೊಂದು ರ‍್ಯಾನ್ ಇಂಟರ್'ನ್ಯಾಷನಲ್ ಶಾಲೆಯ ವೆಬ್ ಸೈಟ್ ಅನ್ನೇ ಹ್ಯಾಕ್ ಮಾಡುವ ಮೂಲಕ ಮೃತ ಬಾಲಕನಿಗೆ  ಶ್ರದ್ಧಾಂಜಲಿ ಸಲ್ಲಿಸಿದೆ.
ಗುರುವಾರ ಬೆಳಗ್ಗೆ ರ‍್ಯಾನ್ ಇಂಟರ್'ನ್ಯಾಷನಲ್ ಶಾಲೆಯ ಅಧಿಕೃತ ವೆಬ್ ಸೈಟ್ ಹ್ಯಾಕ್ ಆಗಿದ್ದು, ಇದಲ್ಲದೆ ಸಂಸ್ಥೆಗೆ ಸಂಬಂಧಿಸಿದ ಹಲವು ವೆಬ್ ಸೈಟ್ ಗಳನ್ನು ಕೂಡ ಹ್ಯಾಕ್ ಮಾಡಲಾಗಿದೆ. ಶಾಲಾ ಬಾಲಕನ ಸಾವಿಗೆ ಕಂಬನಿ  ಮಿಡಿಯುವ ಉದ್ದೇಶದಿಂದ ಶಾಲೆಯ ವೆಬ್ ಸೈಟ್ ಗಳಿಗೆ ದಾಳಿ ಮಾಡಲಾಗಿದೆ ಎಂದು ಹ್ಯಾಕರ್ಸ್ ಗಳು ಬರೆದುಕೊಂಡಿದ್ದಾರೆ. ಕಂಪ್ಯೂಟರ್ ನಲ್ಲಿ ವೆಬ್ ಸೈಟ್ ತೆರೆಯುತ್ತಿದ್ದಂತೆಯೇ ಹ್ಯಾಕರ್ಸ್ ಗಳ ಫೋಟೋ ತೆರೆದುಕೊಳ್ಳುತ್ತಿದ್ದು,  ಅದರಲ್ಲಿ ನೀನು ಸತ್ತಿರಬಹುದು.. ಆದರೆ ನಿನ್ನನ್ನು ಮರೆಯಲು ಸಾಧ್ಯವಿಲ್ಲ ಎಂದು ಹ್ಯಾಕರ್ಸ್ ಗಳು ಬರೆದಿದ್ದಾರೆ.

ಮೂಲಗಳ ಪ್ರಕಾರ ಒಂದೇ ಗುಂಪಿನ ಹ್ಯಾಕರ್ಸ್ ಗಳ ತಂಡ ಶಾಲೆ ಸಂಬಂಧಿಸಿದ ಒಟ್ಟು ನಾಲ್ಕು ವೆಬ್ ಸೈಟ್ ಗಳ ಮೇಲೆ ದಾಳಿ ಮಾಡಿದೆ ಎನ್ನವಾಗಿದೆ. ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಲೇ ಅಮಾಯಕ ಪುಟ್ಟ ಜೀವ  ಬಲಿಯಾಗಿದೆ ಎಂದು ಹ್ಯಾಕರ್ಸ್ ಗಳು ಕಿಡಿಕಾರಿದ್ದಾರೆ.

ಪ್ರಕರಣದ ಪ್ರಮುಖ ಸಾಕ್ಷಿ ಶಾಲೆಯ ತೋಟದ ಮಾಲಿ ಪೊಲೀಸರ ವಶಕ್ಕೆ, ಶಿಕ್ಷಕರ ವಿಚಾರಣೆ

ಇದೇ ವೇಳೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಹರ್ಯಾಣ ಪೊಲೀಸರು ಇಂದು ಶಾಲೆಯ ತೋಟದ ಮಾಲಿ ಹರ್ಪಲ್ ಸಿಂಗ್ ಎಂಬಾತನನ್ನು ವಶಕ್ಕೆ ಪಡೆದು ಆತನನ್ನು ವಿಚಾರಣೆಗೊಳಪಡಿಸಿದ್ದಾರೆ. ಅಂತೆಯೇ  ಶಾಲೆಯ ಶಿಕ್ಷಕರನ್ನು ಕೂಡ ಪೊಲೀಸರು ಇಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
SCROLL FOR NEXT