ದೇಶ

ಡ್ರೈವಿಂಗ್ ಲೈಸೆನ್ಸ್ ಅನ್ನೂ ಆಧಾರ್ ಜೊತೆ ಲಿಂಕ್ ಮಾಡಲು ಕೇಂದ್ರದ ಚಂತನೆ!

Srinivas Rao BV
ಹರ್ಯಾಣ: ಭಾರತವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವತ್ತ ಮತ್ತೊಂದು ಹೆಜ್ಜೆ ಇಡಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದ್ದು, ಪ್ಯಾನ್ ಕಾರ್ಡ್ ನಂತರ ಚಾಲನಾ ಪರವಾನಗಿಯನ್ನೂ ಆಧಾರ್ ನಂಬರ್ ಜೊತೆ ಜೋಡಿಸಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. 
ಡಿಜಿಟಲ್ ಹರ್ಯಾಣ 2017 ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ರವಿಶಂಕರ್ ಪ್ರಸಾದ್, ಆಧಾರ್ ಡಿಜಿಟಲ್ ಗುರುತಾಗಿದೆ. ಡಿಜಿಟಲ್ ಗುರುತು ಭೌತಿಕ ಗುರುತನ್ನು ಸ್ಪಷ್ಟಪಡಿಸುತ್ತದೆ. ಕೇಂದ್ರ ಸರ್ಕಾರ ಚಾಲನಾ ಪರವಾನಗಿಯನ್ನೂ ಆಧಾರ್ ನೊಂದಿಗೆ ಜೋಡಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಸಚಿವ ನಿತಿನ್ ಗಡ್ಕರಿ ಅವರೊಂದಿಗೂ ಮಾತನಾಡಿದ್ದೇನೆ ಎಂದು ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. 
ಅಕ್ರಮ ಹಣ ವಹಿವಾಟನ್ನು ತಡೆಗಟ್ಟಲು ಪ್ಯಾನ್ ಕಾರ್ಡ್ ನ್ನು ಆಧಾರ್ ನಂಬರ್ ನೊಂದಿಗೆ ಜೋಡಿಸಲಾಯಿತು ಎಂದು ರವಿಶಂಕರ್ ಮಾಹಿತಿ ನೀಡಿದ್ದಾರೆ. 
SCROLL FOR NEXT