ಘಟಿಕೋತ್ಸವದಲ್ಲಿ ಸಾಂಪ್ರದಾಯಿಕ ಉಡುಗೆ
ನವದೆಹಲಿ: ಘಟಿಕೋತ್ಸವದಲ್ಲಿ ಪದವೀಧರರು ಧರಿಸುವ ಉಡುಪನ್ನು ಬದಲಾವಣೆ ಮಾಡಲು ಮಾನವ ಸಂಪನ್ಮೂಲ ಇಲಾಖೆ ಚಿಂತನೆ ನಡೆಸಿದೆ.
ಗೌನ್ ಗಳಿಗೆ ಗುಡ್ ಬೈ ಹೇಳಿ ಸಾಂಪ್ರದಾಯಿಕ ಉಡುಗೆಗೆ ಘಟಿಕೋತ್ಸವದ ಉಡುಗೆಯನ್ನು ಬದಲಾವಣೆ ಮಾಡಲು ಮಾನವ ಸಂಪನ್ಮೂಲ ಇಲಾಖೆ ಚಿಂತನೆ ನಡೆಸಿದೆ. ಸೆ.14 ರಂದು ನಡೆದ ಮಾನವ ಸಂಪನ್ಮೂಲ ಇಲಾಖೆಯ ಸಭೆಯಲ್ಲಿ ಗೌನ್ ಗಳಿಗೆ ಗುಡ್ ಬೈ ಹೇಳುವುದಕ್ಕೆ ಒಮ್ಮತ ಮೂಡಿದೆ. ಗೌನ್ ಗಳು ವಸಾಹತಿನ ಸಂಕೇತವಾಗಿದ್ದು, ಗೌನ್ ಗಳಿಗೆ ಗುಡ್ ಬೈ ಹೇಳಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳು, ಐಐಟಿ, ಎನ್ಐಟಿ, ಕೇಂದ್ರ ವಿಶ್ವವಿದ್ಯಾನಿಲಯಗಳು ಘಟಿಕೋತ್ಸವಗಳಿಗೆ ಅಳವಡಿಸಿಕೊಳ್ಳಬೇಕಿರುವ ಉಡುಗೆ ಯಾವ ರೀತಿ ಇರಬೇಕೆಂಬುದನ್ನು ತಿಳಿಸುವಂತೆ ಶೀಘ್ರವೇ ಸಚಿವಾಲಯ ಅಭಿಪ್ರಾಯ, ಸಲಹೆಗಳನ್ನು ನೀಡಲು ನೋಟಿಸ್ ಜಾರಿಗೊಳಿಸಲಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜೂನ್ ತಿಂಗಳಲ್ಲಿ ಐಐಟಿ ಖಾನ್ ಪುರದ ವಿದ್ಯಾರ್ಥಿಗಳಿಗೆ ಘಟಿಕೋತ್ಸವದ ಸಂದರ್ಭದಲ್ಲಿ ಕುರ್ತಾ, ಪೈಜಮಾ ಧರಿಸುವಂತೆ ಸೂಚನೆ ನೀಡಲಾಗಿತ್ತು, ಕಳೆದ ವರ್ಷ ಐಐಟಿ ಬಾಂಬೆಯಲ್ಲಿಯೂ ಸಹ ವಿದ್ಯಾರ್ಥಿಗಳು ಖಾದಿ ತೊಟ್ಟು ಘಟಿಕೋತ್ಸವಕ್ಕೆ ಆಗಮಿಸಿದ್ದರು.