ದೇಶ

ಪರಶುರಾಮ ಸಹ ಇಂಜಿನಿಯರ್ ಆಗಿರಬೇಕು: ಮನೋಹರ್ ಪರಿಕ್ಕರ್

Raghavendra Adiga
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್, ಗೋವಾವನ್ನು ಸೃಷ್ಟಿಸಿದವನು ಎಂದು ನಂಬಲಾದ ಪರಶುರಾಮ, ಸಮುದ್ರದಿಂದ ಭೂಮಿಯನ್ನು ಪಡೆದಿರುವ ಇಂಜಿನಿಯರ್ ಆಗಿರಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಇಂಜಿನಿಯರ್ ದಿನದ  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪರಿಕ್ಕರ್ ಅವರು, "ಈ ದಿನವು ಭಾರತ ಇಂಜಿನಿಯರ್ ಗಳ ಪ್ರತಿಭೆ, ಪ್ರಾಮುಖ್ಯತೆಯನ್ನು ಗುರುತಿಸುವ ದಿನ" ಎಂದರು.
ಪುರಾಣದ ಪ್ರಕಾರ ಗೋವಾ ಮೂಲವನ್ನು ಉಲ್ಲೇಖಿಸುತ್ತಾ, "ಪರಶುರಾಮ ಗೋವಾ ಅನ್ನು ರಚಿಸಿದನು. ನಾನು ಪರಶುರಾಮ ಸಮುದ್ರದಿಂದ ಭೂಮಿ ಪಡೆದ ಕಾರನ ಇಂಜಿನಿಯರ್ ಕುಲಕ್ಕೆ ಸೇರಿದವನು ಎಂದು ನಂಬಬಹುದು."
"ಹಸ್ತಿನಾಪುರ, ಪಾಂಡವ ಅರಮನೆಗಳಂತಹ ಎಲ್ಲಾ ರೀತಿಯ ವಾಸ್ತು ಶೈಲಿಯ ಬಗ್ಗೆ ನಮಗೆ ಸಾವಿರ ವರ್ಷಗಳ ಹಿಂದೆಯೇ. ತಿಳಿದಿತ್ತು "
"ಇಂಜಿನಿಯರಿಂಗ್ ಭಾರತದಲ್ಲಿ ಅಸ್ತಿತ್ವದಲ್ಲಿದ್ದ ಅತ್ಯಂತ ಹಳೆಯ ಕಲೆ ಮತ್ತು ಕೌಶಲ್ಯವಾಗಿದೆ. ಅದುವೇ  ಆಧುನಿಕ ಯುಗದಲ್ಲಿ ಗುರುತಿಸಲ್ಪಟ್ಟಿದೆ " ಎಂದು ಅವರು ಹೇಳಿದರು.
SCROLL FOR NEXT