ಬ್ಲೂವೇಲ್ (ಸಂಗ್ರಹ ಚಿತ್ರ) 
ದೇಶ

ಬ್ಲೂವೇಲ್ ಚಾಲೆಂಚ್: ಮಕ್ಕಳ ಚಟುವಟಿಕೆಗಳ ಮೇಲೆ ನಿಗಾಯಿಡಿ- ಪೋಷಕರಿಗೆ ಕೇಂದ್ರ ಸಲಹೆ

ಅಪಾಯಕಾರಿ ಬ್ಲೂವೇಲ್ ಆಟ ದೇಶದಾದ್ಯಂತ ಭೀತಿಯನ್ನು ಸೃಷ್ಟಿಸಿದ್ದು, ಈ ಹಿನ್ನಲೆಯಲ್ಲಿ ಎಚ್ಚರಿಕೆಯ ಸುತ್ತೋಲೆಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ, ಪೋಷಕರೇ ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಏನು ಮಾಡುತ್ತಿದ್ದಾರೆಂಬುದನ್ನು...

ನವದೆಹಲಿ: ಅಪಾಯಕಾರಿ ಬ್ಲೂವೇಲ್ ಆಟ ದೇಶದಾದ್ಯಂತ ಭೀತಿಯನ್ನು ಸೃಷ್ಟಿಸಿದ್ದು, ಈ ಹಿನ್ನಲೆಯಲ್ಲಿ ಎಚ್ಚರಿಕೆಯ ಸುತ್ತೋಲೆಯನ್ನು ಹೊರಡಿಸಿರುವ ಕೇಂದ್ರ ಸರ್ಕಾರ, ಪೋಷಕರೇ ನಿಮ್ಮ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಏನು ಮಾಡುತ್ತಿದ್ದಾರೆಂಬುದನ್ನು ಗಮನಿಸಿ ಎಂದು ಸಲಹೆ ನೀಡಿದೆ. 
ಜೀವಕ್ಕೆ ಮಾರಕವಾಗಿರುವ ಬ್ಲೂವೇಲ್ ಆಟಕ್ಕೆ ಈ ವರೆಗೂ ದೇಶದಲ್ಲಿ 9 ಮಂದಿ ಬಲಿಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಪೋಷಕರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ಸುತ್ತೋಲೆಯನ್ನು ಹೊರಡಿಸಿದೆ. 
ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾಡುತ್ತಿದ್ದಾರೆನ್ನುವುದನ್ನು ಪೋಷಕರು ಗಮನಿಸಬೇಕು. ಹಾಗೂ ಬ್ಲೂವೇಲ್ ಚಾಲೆಂಜ್ ಆಟದ ಬಗ್ಗೆ ಅಗತ್ಯವಿಲ್ಲದೆ ಮಕ್ಕಳ ಎದುರು ಮಾತನಾಡಬಾರದು. ಮಕ್ಕಳ ಎದುರು ಪೋಷಕರು ಆಡುವ ಮಾತುಗಳು ಅವರಲ್ಲಿ ಕುತೂಹಲವನ್ನುಂಟು ಮಾಡಬಹುದು. ಇದರಿಂದ ಅವರು ಇಂಟರ್ ನೆಟ್ ಗಳಲ್ಲಿ ಹುಡುಕಾಡಬಹುದು ಹೀಗಾಗಿ ಪೋಷಕರು ಈ ರೀತಿಯ ಮಾತುಗಳನ್ನು ಆಡಬಾರದು ಎಂದು ಮನವಿ ಮಾಡಲಾಗಿದೆ. 
ಮಕ್ಕಳು ಒಮ್ಮೆ ಆಟದೊಳಗೆ ಇಳಿದರೆ, ಮತ್ತೆ ಆಟದಿಂದ ಹೊರಬರಲು ಅವರಿಗೆ ಮನಸ್ಸಾಗುವುದಿಲ್ಲ. ಆಟದಿಂದ ಹೊರಬರಲು ಮಕ್ಕಳು ಇಚ್ಛಿಸಿದರೂ ಟಾಸ್ಕ್ ಪೂರ್ಣಗೊಳಿಸಿಯೇ ಹೊರ ಹೋಗುವಂತೆ ಅವರಿಗೆ ಬೆದರಿಕೆ ಹಾಕಲಾಗುತ್ತಿದೆ. ಬ್ಲೂವೇಲ್ ಗೇಮ್ ಸಾಮಾಜಿಕ ಜಾಲತಾಣಗಳಲ್ಲಿ ರಹಸ್ಯವಾಗಿ ಹರಿದಾಡುತ್ತಿದ್ದು, ಆತ್ಮಹತ್ಕೆಗೆ ಪ್ರೇರಣೆ ನೀಡುವುದಿರಂದ ಖಿನ್ನತೆಗೆ ಒಳಗಾಗಿರುವವರನ್ನೇ ಆಟಕ್ಕೆ ಸೇರ್ಪಡೆಯಾಗುವಂತೆ ಪ್ರೇರೇಪಿಸಲಾಗುತ್ತಿದೆ. 

ಹೀಗಾಗಿ ಪೋಷಕರು ತಮ್ಮ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾಡುತ್ತಿದ್ದಾರೆ, ಅವರ ಚಟುವಟಿಕೆಗಳ ಮೇಲೆ ಗಮನಹರಿಬೇಕು. ಮಕ್ಕಳ ವರ್ತನೆ ಬಗ್ಗೆ ಪೋಷಕರು ಸೂಕ್ಷ್ಮವಾಗಿರಬೇಕು. ಬ್ಲೂವೇಲ್ ಆಡುವ ಮಕ್ಕಳು ದೇಹಗ ಮೇಲೆ ಗಾಯಗಳನ್ನು ಮಾಡಿಕೊಳ್ಳುತ್ತಾರೆ. ಸಹಜವಾಗಿಯೇ ಎಂದಿಗಿಂತ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಿದ್ದಾರೆ, ಮಕ್ಕಳ ಮೊಬೈಲ್ ಗಳಲ್ಲಿ ಹೊಸ ಹೊಸ ಮೊಬೈಲ್ ಸಂಖ್ಯೆಗಳು, ಇಮೇಲ್ ಗಳನ್ನು ಬರುತ್ತಿದ್ದರೆ ಪೋಷಕರು ಗಮನಿಸಬೇಕು. ಅಲ್ಲದೆ, ತಮ್ಮ ತಮ್ಮ ಮೊಬೈಲ್ ಹಾಗೂ ಕಂಪ್ಯೂಟರ್'ಗಳಲ್ಲಿ ಉತ್ತಮ ದರ್ಜೆಯ ಪೇರೆಂಟಲ್ ಲಾಕ್ ಅಳವಡಿಸಿಕೊಳ್ಳಬೇಕೆಂದು ತಿಳಿಸಿದೆ. 
ಬ್ಲೂವೇಲ್ ಆಟದ ಮೇಲೆ ನಿಷೇಧ ಹೇರುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಈ ಹಿಂದೆ ಮಧುರೈನ ಎನ್.ಎಸ್ ಪೊನ್ನಯ್ಯನ್ ಎಂಬುವವರು ಸುಪ್ರೀಂಕೋರ್ಟ್ ನಲ್ಲಿ ಮನವಿ ಸಲ್ಲಿಸಿದ್ದರು. ಇದರಂತೆ ವಿಚಾರಣೆ ನಡೆಸಿರುವ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ನಿನ್ನೆ ನೋಟಿಸ್ ವೊಂದನ್ನು ಜಾರಿ ಮಾಡಿದೆ. ಅಲ್ಲದೆ, ಈ ಬಗ್ಗೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಅವರು ನೆರವು ನೀಡಬೇಕೆಂದು ಕೋರಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT