ದೇಶ

ಛತ್ತೀಸ್ ಗಢ: ಸುಕ್ಮಾ ಜಿಲ್ಲೆಯಲ್ಲಿ ಎನ್ ಕೌಂಟರ್, ಇಬ್ಬರು ನಕ್ಸಲೀಯರ ಹತ್ಯೆ

Sumana Upadhyaya
ಸುಕ್ಮಾ(ಛತ್ತೀಸ್ ಗಢ): ಸುಕ್ಮಾ ಜಿಲ್ಲೆಯಲ್ಲಿ ಇಂದು ನಡೆದ ಎನ್ ಕೌಂಟರ್ ನಲ್ಲಿ ಛತ್ತೀಸ್ ಗಢ ಪೊಲೀಸರು ಇಬ್ಬರು ನಕ್ಸಲೀಯರನ್ನು ಹತ್ಯೆಗೈದಿದ್ದಾರೆ.
ಜಿಲ್ಲಾ ಮೀಸಲು ಪಡೆಯ ತಂಡದ ಕಾರ್ಯಾಚರಣೆ ಇದಾಗಿದೆ ಎಂದು ಉಪ ಪೊಲೀಸ್ ಮಹಾ ನಿರ್ದೇಶಕ ಸುಂದರರ್ರಾಜ್ ಪಿ ತಿಳಿಸಿದ್ದಾರೆ. ಈ ತಂಡ ಕಳೆದ ರಾತ್ರಿ ಮಾವೋವಾದಿ ವಿರುದ್ಧ ಕಾರ್ಯಾಚರಣೆ ನಡೆಸಿತ್ತು. ಎನ್ ಕೌಂಟರ್ ಸುಕ್ಮಾ ಜಿಲ್ಲೆಯ ರಸಟೊಂಗ್ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಎನ್ ಕೌಂಟರ್ ನಂತರ ಪೊಲೀಸರು ಶಸ್ತ್ರಾಸ್ತ್ರಗಳು, ಸ್ಫೋಟಕ ಸಾಮಗ್ರಿಗಳು ಮತ್ತು ವೈರ್ ಲೆಸ್ ಸೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
SCROLL FOR NEXT