ಪಣಜಿ: ಗೋವಾ ರಾಜ್ಯದಲ್ಲಿ ಇನ್ನು ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಲಾಗುವುದು ಎಂದು ಗೋವಾ ರಾಜ್ಯ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ತಿಳಿಸಿದ್ದಾರೆ.
ಮದ್ಯಪಾನ ಸೇವಿಸಿ ಗಲಾಟೆ ಮಾಡಿ ತೊಂದರೆ ಸೃಷ್ಟಿಸುವವರನ್ನು ತಡೆಯುವ ದೃಷ್ಟಿಯಿಂದ ಈ ನಿಯಮ ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.
ತನ್ನ ಹತ್ತಿರದ ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮಾಡಲು ಅವಕಾಶ ನೀಡುವ ಬಾರ್ ಅಂಗಡಿಗಳಿಗೆ ಸರ್ಕಾರ ದಂಡ ವಿಧಿಸಲಿದೆ ಅಥವಾ ಕೆಲವು ಸಂದರ್ಭಗಳಲ್ಲಿ ಅನುಮತಿಯನ್ನು ರದ್ದುಪಡಿಸಲಿದೆ ಎಂದು ಪರಿಕ್ಕರ್ ಇದೇ ಸಂದರ್ಭದಲ್ಲಿ ತಿಳಿಸಿದರು. ಗೋವಾ, ಡಿಯೊ ಮತ್ತು ದಮನ್ ಅಬಕಾರಿ ಕಾಯ್ದೆ 1964ಕ್ಕೆ ಅಗತ್ಯ ತಿದ್ದುಪಡಿಗಳನ್ನು ಮುಂದಿನ ತಿಂಗಳ ತರಲಾಗುವುದು ಎಂದರು.
ಗೋವಾ ಸರ್ಕಾರ ಈಗಾಗಲೇ ಸಮುದ್ರ ತೀರಗಳ ಪಕ್ಕ ಮದ್ಯಪಾನ ಮಾಡುವುದಕ್ಕೆ ನಿಷೇಧ ಹೇರಿದೆ.